More

    ನಮ್ಮ ಪ್ರಧಾನಿ ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ

    ಬೆಂಗಳೂರು: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಇಂದು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕ್ರೀಡಾದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡರು. ಕರ್ನಾಟಕ ಒಲಿಂಪಿಕ್ಸ್​ ಸಂಸ್ಥೆ ಪದ್ಮಭೂಷಣ ಮೇಜರ್ ಧ್ಯಾನ್​​ಚಂದ್ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಒಲಿಂಪಿಯನ್ಸ್​ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭದಲ್ಲಿ ಸಿಎಂ ಭಾಗಿಯಾದರು.

    ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಅತ್ಯಂತ ಅದೃಷ್ಟದ ನಾಡು, ರಾಜ್ಯಪಾಲರೇ ಕ್ರೀಡಾಪಟುವಾಗಿದ್ದಾರೆ. ರಾಜ್ಯಪಾಲರು ಅಂತಾರಾಜ್ಯ ಕ್ರೀಡಾಪಟುವಾಗಿರುವುದು ನಮ್ಮ ಹೆಮ್ಮೆ. ಅವರೇ ರಾಜ್ಯದ ಚುಕ್ಕಾಣಿಯಲ್ಲಿ ಇರುವುದರಿಂದ ಇಡೀ ರಾಜ್ಯ ಕ್ರೀಡೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ ಎಂದು ಹೇಳಿದರು.

    ಮೇಜರ್ ಧ್ಯಾನ್​ಚಂದ್ ಹೆಸರಿನಲ್ಲಿ ಕ್ರೀಡಾ ದಿನ ಅಂತ ಆಚರಿಸಬೇಕು ಅಂತ ಪ್ರಧಾನಿಗಳು ಹೇಳಿದ್ದಾರೆ. ಇಡೀ ದೇಶಕ್ಕೆ ಧ್ಯಾನ್​ಚಂದ್​ ಸ್ಫೂರ್ತಿ, ಧ್ಯಾನ್​​ಚಂದ್ ರೆಕಾರ್ಡ್ ಬ್ರೇಕ್ ಮಾಡುವುದಕ್ಕೆ ಈಗಿನವರೆಗೂ ಯಾರಿಗೂ ಆಗಿಲ್ಲ ಎಂದ ಸಿಎಂ, ನಮ್ಮ ಪ್ರಧಾನಿ ಅತ್ಯಂತ ಸೂಕ್ಷ್ಮ ವ್ಯಕ್ತಿ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಖೇಲ್ ರತ್ನ ಕೇವಲ ಖೇಲ್ ರತ್ನ ಮಾತ್ರ ಆಗಿತ್ತು. ಇಡೀ ಖೇಲ್ ರತ್ನ ಪ್ರಶಸ್ತಿಗೆ ಪ್ರಧಾನಿಗಳು ಹೊಸ ಮೆರುಗನ್ನು ನೀಡಿದರು. ಖೇಲೋ ಇಂಡಿಯಾ ಅಂತ ಯಾವ ಪ್ರಧಾನಿ ಉತ್ಸಾಹ ತುಂಬುತ್ತಾರೆ ಹೇಳಿ ಸಿಎಂ ಪ್ರಧಾನಿಯವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

    ನಮ್ಮ ಪ್ರಧಾನಿ ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ

    ಖೇಲೋ ಇಂಡಿಯಾ ಅಂತ ಪ್ರಧಾನಿಯವರು ಹೇಳಿದಾಗಿನಿಂದ ನಮ್ಮ ಯುವಕರ ಮೂಡೇ ಚೇಂಜ್ ಆಗಿದೆ. ನಮ್ಮ ಸರ್ಕಾರ ಕ್ರೀಡಾಪಟುಗಳಿಗೆ ಹೆಚ್ಚಿನ ಮನ್ನಣೆ ನೀಡಲಿದೆ. ಬಜೆಟ್​​ನಲ್ಲಿ ಕ್ರೀಡೆಗೆ ಹೆಚ್ಚಿನ ಅನುದಾನ ನೀಡಲಾಗುವುದು. ಮೂಲಸೌಕರ್ಯ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಕೋಚ್​ಗಳನ್ನು ನೀಡುವ ಬಗ್ಗೆಯೂ ಚಿಂತನೆ ಮಾಡಿದ್ದೇವೆ. ಏಕೆಂದರೆ ಅತ್ಯುತ್ತಮ ಗುರುವಿಲ್ಲದೆ ಶಿಷ್ಯ ಸಿದ್ಧನಾಗಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು.
    ರಾಜ್ಯಪಾಲರಾದ ಥಾವರ್ ಚಂದ ಗೆಹ್ಲೋತ್​, ಕ್ರೀಡಾ ಸಚಿವ ಡಾ. ನಾರಾಯಣಗೌಡ, ಕರ್ನಾಟಕ ಒಲಿಂಪಿಕ್ಸ್​ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಮತ್ತು ಇತರರು ಭಾಗವಹಿಸಿದ್ದರು.

    ಕಡಿಮೆ ಬಾಡಿಗೆಗೆ ತೆರಳುತ್ತಿದ್ದವ ಕೊಲೆಯಾಗಿ ಹೋದ; 12 ಗಂಟೆಯೊಳಗೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ ಪೊಲೀಸರು

    ಬಸ್ ಟಿಕೆಟ್​ನಿಂದ ಸಿಕ್ಕಿಬಿದ್ದರು!; ಮೈಸೂರಲ್ಲಿ ಯುವತಿ ಗ್ಯಾಂಗ್​ರೇಪ್ ಕೇಸ್, ತಮಿಳುನಾಡಿನಲ್ಲಿ ಐವರ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts