ಮಾಸ್ಕ್ ಧರಿಸಿಯೇ ಚಂದನ್-ಕವಿತಾ ಕಲ್ಯಾಣ: ಶುಭ ಶುಕ್ರವಾರ ಪ್ರೇಮಿಗಳ ಸಪ್ತಪದಿ

Kavitha
Published on

ಬೆಂಗಳೂರು: ಕಳೆದ ತಿಂಗಳಷ್ಟೇ ಸರಳವಾಗಿ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಟಾರ್ ಜೋಡಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಶುಭ ಶುಕ್ರವಾರ ಸಪ್ತಪದಿ ತುಳಿದಿದ್ದಾರೆ. ಕೆಲ ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ಹಸೆಮಣೆ ಏರಿದದ್ದಾರೆ. ಸಿನಿಮಾ ಮಂದಿಯ ಮದುವೆ ಅಂದರೆ ಸಹಜವಾಗಿ ಅಲ್ಲಿ ಅದ್ದೂರಿತನ ಇದ್ದೇ ಇರುತ್ತದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕೇವಲ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿಯ ವಿವಾಹ ಕಾರ್ಯ ನೆರವೇರಿದೆ. ಬೆಂಗಳೂರಿನ ಸಹಕಾರನಗರದಲ್ಲಿ ಮದುವೆ ಕಾರ್ಯ ನಡೆದಿದ್ದು, ವಧು ವರರು ಮುಖಕ್ಕೆ ಮಾಸ್ಕ್ ಧರಿಸಿಯೇ ಮಾಂಗಲ್ಯ ಧಾರಣೆಯಲ್ಲಿ ಪಾಲ್ಗೊಂಡಿದ್ದಾರೆ. ‘ಮನೆ ಮದುವೆ.. ಮದುವೆ ಮನೆ.. ಅದ್ದೂರಿಯಾಗಿಲ್ಲ. ಆದರೆ ಸಂತಸದಿಂದ ತುಂಬಿದೆ’ ಎಂದು ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net