

ಬಾಲಿವುಡ್ ನಟಿ ಕತ್ರಿನಾ ಕೈಫ್ ಇದೇ ಜುಲೈ 16ರ ಶನಿವಾರ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಮದುವೆಯಾದ ಬಳಿಕ ಮೊದಲ ಹುಟ್ಟುಹಬ್ಬವಾದ ಕಾರಣ ಪತಿ ಹಾಗೂ ಫ್ರೆಂಡ್ಸ್ ಜತೆ ದೂರದ ಮಾಲ್ಡೀವ್ಸ್ನಲ್ಲಿ ಭರ್ಜರಿಯಾಗಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಪತಿ ವಿಕ್ಕಿ ಕೌಶಲ್, ಅವರ ಸಹೋದರ ಸನ್ನಿ ಕೌಶಲ್, ಕತ್ರಿನಾ ಸಹೋದರಿ ಇಸಬೆಲ್ಲಾ ಕೈಫ್, ನಟಿ ಇಲಿಯಾನಾ ಡಿಕ್ರೂಜ್, ಅಂಗಿರಾ ಧರ್, ಶಾರ್ವರಿ ವಾಘ್, ಆನಂದ್ ತಿವಾರಿ ಹಾಗೂ ಮಿನಿ ಮಾಥುರ್ ಜೊತೆ ಕತ್ರಿನಾ ಈ ಬಾರಿಯ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಆಚರಣೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸದ್ಯ ವೈರಲ್ ಆಗಿವೆ.
ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ ಕಳೆದ ವರ್ಷ ‘ಸೂರ್ಯವಂಶಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕತ್ರಿನಾ ಈಗ ಹಾರರ್ ಕಾಮಿಡಿ ‘ಫೋನ್ ಭೂತ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿದ್ಧಾಂತ್ ಚತುರ್ವೆದಿ, ಇಶಾನ್ ಖಟ್ಟರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇದೇ ನವೆಂಬರ್ 4ರಂದು ಚಿತ್ರ ತೆರೆಗೆ ಬರಲಿದೆ. ಅದರ ಜತೆಗೆ ಥ್ರಿಲ್ಲರ್ ‘ಮೆರ್ರಿ ಕ್ರಿಸ್ಮಸ್’ ಚಿತ್ರದಲ್ಲೂ ಕತ್ರಿನಾ ನಟಿಸುತ್ತಿದ್ದು, ಇದೇ ಮೊದಲ ಬಾರಿಗೆ ದಕ್ಷಿಣದ ಸ್ಟಾರ್ ನಟ ವಿಜಯ್ ಸೇತುಪತಿ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.
ಶ್ರೀರಾಮ್ ರಾಘವನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದೇ ಡಿಸೆಂಬರ್ 23ರಂದು ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಹಾಗೆಯೇ ಸಲ್ಮಾನ್ ಖಾನ್ಗೆ ನಾಯಕಿಯಾಗಿ ‘ಟೈಗರ್ 3’ ಚಿತ್ರದಲ್ಲೂ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ 2023ರ ಏಪ್ರಿಲ್ನಲ್ಲಿ ಬಿಡುಗಡೆ ಆಗಲಿದೆ. - ಏಜೆನ್ಸೀಸ್