

ವಿಕ್ಕಿ ಕೌಶಾಲ್ ಹಾಗೂ ಕತ್ರೀನಾ ಕ್ೃ ಕಳೆದೆರೆಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ವಿಷಯ ಹೊಸದೇನಲ್ಲ. ಆದರೆ, ವಿಕ್ಕಿ ಆಗಲೀ, ಕತ್ರೀನಾ ಆಗಲೀ ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮೂಲಗಳ ಪ್ರಕಾರ, ವಿಕ್ಕಿ ತಂದೆಗೆ ಕತ್ರೀನಾ ತಮ್ಮ ಸೊಸೆಯಾಗಿ ಬರುವುದು ಇಷ್ಟವಿಲ್ಲವಂತೆ. ಹಾಗಾಗಿ, ಮೊದಲು ಅವರನ್ನು ಒಪ್ಪಿಸಿ, ಆ ನಂತರ ಈ ವಿಷಯವನ್ನು ಬಹಿರಂಗಗೊಳಿಸುವುದಕ್ಕೆ ಇಬ್ಬರೂ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ವಿಕ್ಕಿ ಬಗ್ಗೆ ಕತ್ರೀನಾಗೆ ವ್ಯಾಮೋಹ ಹೆಚ್ಚಾಗಿದ್ದು, ಇನ್ನು ಮುಂದೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. "ಮನ್ಮರ್ಜಿಯಾನ್' ಚಿತ್ರದಲ್ಲಿ ವಿಕ್ಕಿ ಮತ್ತು ತಾಪ್ಸಿ ನಡುವಿನ ರೊಮ್ಯಾಂಟಿಕ್ ದೃಶ್ಯಗಳು ಸಾಕಷ್ಟು ಚರ್ಚೆಯಾಗಿತ್ತು. ಇನ್ನು ಮುಂದೆ, ಅಂತಹ ದೃಶ್ಯಗಳಿಂದ ದೂರ ಇರಬೇಕು ಎಂದು ವಿಕ್ಕಿಗೆ ಕತ್ರೀನಾ ಸ್ಪಷ್ಟಪಡಿಸಿದ್ದಾರಂತೆ. ಅದಕ್ಕೆ ಕಾರಣವೂ ಇದೆ.
ವಿಕ್ಕಿಗೂ ಮುನ್ನ ರಣಬೀರ್ ಕಪೂರ್ ಜತೆಗೆ ಡೇಟಿಂಗ್ ಮಾಡುತ್ತಿದ್ದರು ಕತ್ರೀನಾ. ರಣಬೀರ್ ತಮ್ಮ ಚಿತ್ರಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರ ಜತೆಗೆ, ಆ ನಟಿಯರ ಜತೆಗೆ ಬಹಳ ಹತ್ತಿರವಾಗಿದ್ದರು. ಇದೇ ಕಾರಣದಿಂದ, ರಣಬೀರ್ ಮತ್ತು ಕತ್ರೀನಾ ನಡುವೆ ಬ್ರೇಕಪ್ ಆಯಿತು. ತಮ್ಮ ಜೀವನದಲ್ಲಿ ಇದು ಪುನರಾವರ್ತನೆಯಾಗಬಾರದು ಎಂಬ ಕಾರಣಕ್ಕೆ ಕತ್ರೀನಾ ಬಹಳ ಎಚ್ಚರ ವಹಿಸಿದ್ದಾರಂತೆ. ವಿಕ್ಕಿ ತಮ್ಮ ಚಿತ್ರದ ಹೀರೋಯಿನ್ಗಳಿಂದ ದೂರವೇ ಇರಬೇಕು ಎಂದು ಬಯಸುತ್ತಿದ್ದಾರಂತೆ. ಅವರ ಬಯಕೆ ಈಡೇರುತ್ತದೆಯೇ? ಎಂಬುದನ್ನು ಕಾದು ನೋಡಬೇಕು. & ಏಜೆನ್ಸೀಸ್