ಆರ್ಜೆ ಬಾಲಾಜಿ ನಿರ್ದೇಶನ ಮತ್ತು ಸಾಯಿ ಅಭಯಂಕರ್ ಅವರ ಸಂಗೀತದ ಸಿನಿಮಾ ಕರುಪ್ಪು ಸಾಕಷ್ಟು ಗೊಂದಲಗಳ ಮಧ್ಯೆ ಬಾಕ್ಸ್ ಆಫೀಸ್ನಲ್ಲಿ ಭಾರಿ ಗಳಿಕೆಯನ್ನು ಕಾಣುತ್ತಿದೆ. ನೆಟ್ಫ್ಲಿಕ್ಸ್ ಭಾರಿ ಮೊತ್ತಕ್ಕೆ ಕರುಪ್ಪು ಸಿನಿಮಾವನ್ನು ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಈ ಹಿಂದೆ ಅಮೆಜಾನ್ ಸಹ ಖರೀದಿಸುವ ರೇಸ್ನಲ್ಲಿತ್ತು ಎನ್ನುವ ಉಹಾಪೋಹವಿತ್ತು. ಆದರೆ ಅಂತಿಮವಾಗಿ ನೆಟ್ಫ್ಲಿಕ್ಸ್ನಲ್ಲಿ ನೋಡಬಹುದು. ಆದರೆ, ಈ ಬಗ್ಗೆ ಕರುಪ್ಪು ಸಿನಿಮಾ ತಂಡವಾಗಲಿ, ಓಟಿಟಿ ಪ್ಲ್ಯಾಟ್ಫಾರ್ಮ್ ಆಗಲಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.