ಕಾಶ್ಮೀರದಲ್ಲಿ ಐಸ್​ ಬಾತ್ ಪಡೆದು ಶೂಟಿಂಗ್ ಮುಗಿಸಿದ ಕಾರ್ತಿಕ್ ಆರ್ಯನ್

kartik
Published on

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಇತ್ತೀಚೆಗೆ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೊಸ ಸಿನಿಮಾ ‘ಚಂದು ಚಾಂಪಿಯನ್‌‘ ೋಷಣೆ ಮಾಡಿದ್ದು, ಮೊದಲ ನೋಟ ರಿಲೀಸ್ ಮಾಡಲಾಗಿತ್ತು.

ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದ್ದು, 1972ರಲ್ಲಿ ಭಾರತಕ್ಕೆ ಪ್ಯಾರಾಲಿಂಪಿಕ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದ ಈಜುಪಟು ಮುರಳೀಕಾಂತ್ ಪೇಟ್ಕರ್ ಜೀವನಾಧಾರಿತ ಕಥೆ ‘ಚಂದು ಚಾಂಪಿಯನ್’. 1965ರ ಭಾರತ - ಪಾಕಿಸ್ತಾನ ಯುದ್ಧದ ಸಮಯದಲ್ಲಿ ಗುಂಡಿನ ದಾಳಿಗೆ ಒಳಗಾಗಿ ಕಾಲುಗಳನ್ನು ಕಳೆದುಕೊಂಡ ಅವರು, ನಂತರ ಈಜು ಸೇರಿ ಬೇರೆ ಕ್ರೀಡೆಗಳತ್ತ ಗಮನ ಹರಿಸಿದ್ದರು. 1972ರಲ್ಲಿ ಜರ್ಮನಿಯಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ 50 ಮೀ. ಈಜು ಸ್ಪರ್ಧೆಯನ್ನು ಕೇವಲ 37.33 ಸೆಕೆಂಡುಗಳಲ್ಲಿ ಕ್ರಮಿಸಿ, ವಿಶ್ವದಾಖಲೆ ನಿರ್ಮಿಸಿದ್ದರು. ಇದೀಗ ಚಿತ್ರೀಕರಣ ಪೂರ್ಣಗೊಂಡ ಖುಷಿಯಲ್ಲಿ ನಟ ಕಾರ್ತಿಕ್ ಆರ್ಯನ್ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ.

ಕಾಶ್ಮೀರದಲ್ಲಿ ಐಸ್‌ಬಾತ್ ಪಡೆಯುತ್ತಿರುವ ವೀಡಿಯೋ ಜತೆಗೆ ‘ಆ್ಯಕ್ಷನ್ ಸನ್ನಿವೇಶದ ಚಿತ್ರೀಕರಣದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದ್ದು, ಮೊದಲ ಬಾರಿಗೆ ಐಸ್‌ಬಾತ್ ಅನುಭವ ಪಡೆಯುತ್ತಿದ್ದೇನೆ. ಅದೂ ಕಾಶ್ಮೀರದಲ್ಲಿ!’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net