ಮತ್ತೆ ಸ್ಲಿಮ್​ ಆಗುತ್ತಿದ್ದಾರೆ ಕರೀನಾ; ಹಾಟ್​ ಫೋಟೋ ಹರಿಬಿಟ್ಟ ಬಾಲಿವುಡ್​ ಬೆಡಗಿ

kareena
Published on

ಮುಂಬೈ: ನಟಿ ಕರೀನಾ ಕಪೂರ್​ ಕೆಲ ತಿಂಗಳ ಹಿಂದೆ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿಯಾಗಿದ್ದ ಸಮಯದಲ್ಲಿ ತೂಕ ಹೆಚ್ಚಿಸಿಕೊಂಡಿದ್ದ ನಟಿ ಇದೀಗ ಮತ್ತೊಮ್ಮೆ ವರ್ಕ್​ಔಟ್​ನತ್ತ ಮುಖ ಮಾಡಿದ್ದು, ತೂಕ ಇಳಿಸಿಕೊಳ್ಳಲಾರಂಭಿಸಿದ್ದಾರೆ. ಸ್ಲಿಮ್​ ಆಗಿರುವ ಹಾಟ್​ ಫೋಟೋವೊಂದನ್ನು ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸೈಫ್​-ಕರೊನಾ ದಂಪತಿ 2016ರಲ್ಲಿ ತೈಮೂರ್​ಗೆ ಜನ್ಮ ನೀಡಿದ್ದರು. ಅದಾದ ನಂತರ ಈ ವರ್ಷದ ಏಪ್ರಿಲ್​ನಲ್ಲಿ ಕರೀನಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಫೋಟೋವನ್ನು ಇನ್ನೂ ಸಾಮಾಜಿಕವಾಗಿ ಹಂಚಿಕೊಂಡಿಲ್ಲ. ಇಷ್ಟು ದಿನಗಳ ಕಾಲ ಮಗುವಿನ ಲಾಲನೆ ಪಾಲನೆಯಲ್ಲೇ ಕಾಲ ಕಳೆದಿರುವ ಕರೀನಾ ಇದೀಗ ತಮ್ಮ ವೃತ್ತಿ ಬದುಕಿನತ್ತಲೂ ಗಮನ ಹರಿಸಲು ಮುಂದಾಗಿದ್ದಾರೆ. ಅದಕ್ಕಾಗಿ ವರ್ಕ್​ಔಟ್​, ಯೋಗಾ ಮಾಡಿ ತೂಕ ಇಳಿಸಿಕೊಳ್ಳುತ್ತಿದ್ದಾರೆ.

ಮನೆಯ ಕಿಟಕಿಯ ಗ್ಲಾಸ್​ ಮುಂದೆ ನಿಂತು ಗ್ಲಾಸ್​ನಲ್ಲಿ ತಮ್ಮ ದೇಹ ಕಾಣಿಸುವಂತೆ ಫೋಟೋ ತೆಗೆದುಕೊಂಡು ಹಂಚಿಕೊಂಡಿರುವ ಕರೀನಾ, "ಗ್ಲಾಸ್​ನಲ್ಲಿ ಕಾಣುವ ವಸ್ತುಗಳು ಕಾಣುವುದಕ್ಕಿಂತ ಹೆಚ್ಚು ಹತ್ತಿರದಲ್ಲೇ ಇರುತ್ತವೆ. ಹಾಗಾಗಿ ಹೆಚ್ಚಿನ ಅಂತರ ಕಾಪಾಡಿಕೊಳ್ಳಿ, ಅದುವೇ ಈಗಿನ ನ್ಯೂ ನಾರ್ಮಲ್​" ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸೆಟ್​ಗೆ ಬರಲು ಸಿದ್ಧವಾಗಿರುವಂತೆ ಕಾಣುತ್ತಿದೆ, ಫಿಟ್​ ಆಗಿದ್ದೀರ ಎನ್ನುವ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net