ಮತ್ತೆ ಒಂದಾದ ಹೃತಿಕ್ ಕರೀನಾ?; 2 ದಶಕದ ಬಳಿಕ ಒಟ್ಟಿಗೆ ನಟನೆ...

Kareena
Published on

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಒಟ್ಟಿಗೆ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಕಳೆದ ಎರಡು ದಶಕಗಳಿಂದ ಇವರಿಬ್ಬರೂ ಒಟ್ಟಿಗೆ ಒಂದೇ ಒಂದು ಸಿನಿಮಾದಲ್ಲಿ ನಟಿಸಿಲ್ಲ ಎಂಬುದು ವಿಪರ್ಯಾಸ. 2003ರಲ್ಲಿ ‘ಮೈ ಪ್ರೇಮ್ ಕೀ ದೀವಾನಿ ಹೂಂ’ ಚಿತ್ರದಲ್ಲಿ ಹೃತಿಕ್ ಮತ್ತು ಕರೀನಾ ಒಟ್ಟಿಗೆ ನಟಿಸಿದ್ದೇ ಕೊನೆ. ಆ ನಂತರ ಅವರಿಬ್ಬರೂ ಒಟ್ಟಿಗೆ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ.

ಇದೀಗ ಸುದೀರ್ಘ ಎರಡು ದಶಕದ ಗ್ಯಾಪ್​ಗೆ ಬ್ರೇಕ್ ಬೀಳುವ ಕಾಲ ಹತ್ತಿರವಾದಂತಿದೆ. ಈ ಜೋಡಿ ಹೊಸ ಚಿತ್ರವೊಂದರಲ್ಲಿ ಮತ್ತೊಮ್ಮೆ ಜತೆಯಾಗಿ ನಟಿಸಲಿದೆ ಎಂಬ ಸುದ್ದಿಯೊಂದು ಕೇಳಿಬಂದಿದೆ. ಜಂಗ್ಲಿ ಪಿಕ್ಚರ್ಸ್ ಸಂಸ್ಥೆಯು ಈ ಜೋಡಿಯನ್ನಿಟ್ಟುಕೊಂಡು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು, ಇಬ್ಬರ ಪೈಕಿ ಕರೀನಾಗೆ ಚಿತ್ರದ ಕಥೆಯೂ ಒಪ್ಪಿಗೆಯಾಗಿದ್ದು, ಹೃತಿಕ್ ಕಡೆಯಿಂದ ಇನ್ನಷ್ಟೇ ಗ್ರೀನ್ ಸಿಗ್ನಲ್ ಸಿಗಬೇಕಿರುವುದಷ್ಟೇ ಬಾಕಿ.

ಅಷ್ಟೇ ಅಲ್ಲ ಚಿತ್ರಕ್ಕೆ ‘ಉಲಜ್’ ಎಂಬ ಶೀರ್ಷಿಕೆಯನ್ನೂ ಇಡಲಾಗಿದೆಯೆಂಬ ಸುದ್ದಿಯೂ ಇದೆ. ಇನ್ನೇನು ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಜತೆಗೆ ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆಯೂ ಮಾಹಿತಿ ಹೊರಬೀಳಬೇಕಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net