

ಇತ್ತೀಚೆಗಷ್ಟೇ ಬಾಲಿವುಡ್ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮನೆಯ ಕೆಲಸದವರಿಗೆ ಕರೊನಾ ಪಾಸಿಟಿವ್ ಪತ್ತೆಯಾಗಿತ್ತು. ಅದಾದ ಬಳಿಕ ಅಧಿಕೃತ ಪ್ರಕಟಣೆ ಹೊರಡಿಸಿದ್ದ ಬೋನಿ ಕಪೂರ್, ಮನೆ ಮತ್ತು ಮನೆಯಲ್ಲಿರುವವರ ಬಗ್ಗೆಯೂ ಹೇಳಿಕೊಂಡಿದ್ದರು. ಇದೀಗ ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ಗೂ ಕರೊನಾ ಕಂಟಕ ಶುರುವಾಗಿದೆ. ಅಂದರೆ, ಅವರ ಮನೆಯಲ್ಲಿನ ಇಬ್ಬರು ಕೆಲಸಗಾರರಿಗೆ ಕರೊನಾ ಪಾಸಿಟಿವ್ ವರದಿ ಬಂದಿದೆ.
ಇದನ್ನೂ ಓದಿ: ಪ್ರಣೀತಾ ಶಭಾಷ್: ಗ್ಲಾಮರ್ ಹುಡುಗಿಯ ಇನ್ನೊಂದು ಮುಖ
ಹಾಗೆ ವರದಿ ಬಂದಿದ್ದೇ ತಡ, ಜಾಲತಾಣದಲ್ಲಿ ಆ ಬಗ್ಗೆ ಬರೆದುಕೊಂಡಿರುವ ಕರಣ್, ಆ ಇಬ್ಬರು ಕೆಲಸಗಾರರಿಗೆ ತಮ್ಮದೆ ಬಂಗಲೆಯಲ್ಲಿ ಕ್ವಾರಂಟೈನ್ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ವಿಚಾರವನ್ನು ಬಾಂಬೆ ಮುನ್ಸಿಪಲ್ ಕಾರ್ಪೋರೇಷನ್ ಗಮನಕ್ಕೂ ತಂದಿದ್ದು, ಪೂರ್ತಿ ಕಟ್ಟಡಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಿಸಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ಶುರು ಮಾಡಿದ ಅಕ್ಷಯ್ ಕುಮಾರ್ …
ಇನ್ನುಳಿದಂತೆ ಕುಟುಂಬದವರು ಮತ್ತು ಕೆಲಸಗಾರರ ಕೋವಿಡ್ ಪರೀಕ್ಷೆ ನೆಗೆಟಿವ್ ಬಂದಿದ್ದು, ಸೋಂಕು ನಿಯಂತ್ರಣಕ್ಕೆ ಮತ್ತು ಅದರ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಕರಣ್ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)