ಬಾಲಿವುಡ್​ ಸ್ಟಾರ್​ಗಳ ಡಿಜಿಟಲ್​ ನಿಧಿ ಸಂಗ್ರಹ ಕಾರ್ಯಕ್ಕೆ ಕೈ ಜೋಡಿಸಿದ ಹಾಲಿವುಡ್​ ಕಲಾವಿದರು

ಕರನ
Published on

ಮುಂಬೈ: ಕರೊನಾ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲೇ ನಿಧಿ ಸಂಗ್ರಹ ಕೆಲಸ ಶುರುವಾಗಿದೆ. ಕೋಟಿ ಕೋಟಿ ಮೊತ್ತವನ್ನು ಸಂಗ್ರಹ ಮಾಡಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಇದೀಗ ‘ಐ ಫಾರ್​ ಇಂಡಿಯಾ’ ಹೆಸರಿನಲ್ಲಿ ಇದೀಗ ಡಿಜಿಟಲ್​ ಹಣ ಸಂಗ್ರಹಕ್ಕೆ ಬಾಲಿವುಡ್​ ಮಂದಿ ಕೈ ಜೋಡಿಸಿದ್ದು, ಹಾಲಿವುಡ್​ನವರೂ ದೇಣಿಗೆ ನೀಡುತ್ತಿದ್ದಾರೆ.
ಹೌದು, ಬಾಲಿವುಡ್ ನಿರ್ಮಾಪಕ ಕರಣ್​ ಜೋಹರ್​, ನಿರ್ದೇಶಕಿ ಜೋಯಾ ಅಖ್ತರ್​ ಶುರು ಮಾಡಿದ್ದ ಈ ಅಭಿಯಾನಕ್ಕೆ, ಶಾರುಖ್​ ಖಾನ್, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್​, ಆಮೀರ್​ ಖಾನ್​, ಅಕ್ಷಯ್​ ಕುಮಾರ್​, ಹೃತಿಕ್​ ರೋಷನ್​ ಸೇರಿ ಹತ್ತಾರು ಕಲಾವಿದರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರ್ಯಕ್ಕೆ ಇದೀಗ ಹಾಲಿವುಡ್​ನ ಸೆಲೆಬ್ರಿಟಿಗಳೂ ಕೈ ಜೋಡಿಸಿದ್ದಾರೆ.
ಹಾಲಿವುಡ್​ ನಟ ವಿಲ್ ಸ್ಮಿತ್​, ಜೋನಸ್​ ಸಹೋದರರು, ಬ್ರಾಯ್ನ್​ ಅಡಾಮ್ಸ್​ ಮುಂದೆ ಬಂದು ದೇಣಿಗೆ ನೀಡುತ್ತಿದ್ದಾರೆ. ಬಾಲಿವುಡ್​ನ ಖ್ಯಾತ ಗಾಯಕರು, ಕ್ರಿಕೆಟಿಗರೂ ಈ ಡಿಜಿಟಲ್​ ಫಂಡ್​ ರೈಸಿಂಗ್​ಗೆ ಕೈ ಜೋಡಿಸಿದ್ದು, ಶೀಘ್ರದಲ್ಲಿ ದೇಣಿಗೆ ಸಂಗ್ರಹಕ್ಕೆ ಆನ್ಲೈನ್ ಕನ್ಸರ್ಟ್​ ಸಹ ಆಯೋಜಿಸಲಿದ್ದಾರಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net