ಬೆಂಬಲಕ್ಕೆ ಬಾರದ ಬಾಲಿವುಡ್​ ... ಸಿಟ್ಟಾದ ಕರಣ್​ ಏನ್​ ಮಾಡಿದ್ರು ಗೊತ್ತಾ?

Karan Johar - Final
Published on

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಸಿಕ್ಕಾಪಟ್ಟೆ ಚರ್ಚೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಕ್ಕಾಪಟ್ಟೆ ಟಾರ್ಗೆಟ್​ ಆಗಿರುವವರು ನಿರ್ದೇಶಕ-ನಿರ್ಮಾಪಕ ಕರಣ್​ ಜೋಹಾರ್​. ಕರಣ್ ಸ್ವಜನಪಕ್ಷಪಾತವನ್ನು ಪೋಷಿಸುತ್ತಿದ್ದಾರೆ ಮತ್ತು ಇದರಿಂದ ಹೊಸಬರಿಗೆ ಬೆಳೆಯುವದಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಹಲವರು ಅವರ ವಿರುದ್ಧ ಆರೋಪ ಮಾಡಿದ್ದಾರೆ.

ಒಂದು ಕಡೆ ಬೆಂಬಿಡದ ಆರೋಪ, ಇನ್ನೊಂದು ಕಡೆ ತಮ್ಮ ಬೆಂಬಲಕ್ಕೆ ಯಾರೂ ನಿಲ್ಲದಿರುವುದು ಕರಣ್​​ ಜೋಹಾರ್​ ಅವರ ನಿದ್ದೆಗೆಡಿಸಿದೆ. ಇತ್ತೀಚಿನ ಬೆಳವಣಿಗೆಗಳಿಂದ ಸಿಟ್ಟಾಗಿರುವ ಅವರು, ಮಾಮಿ (ಮುಂಬೈ ಅಕಾಡೆಮಿ ಆಫ್​ ದಿ ಮೂವಿಂಗ್​ ಇಮೇಜಸ್​​) ಚಿತ್ರೋತ್ಸವದ ಮಂಡಳಿಗೆ ರಾಜಿನಾಮೆ ನೀಡಿದ್ದಾರೆ. ಈಗಾಗಲೇ ಅವರು ತಮ್ಮ ರಾಜಿನಾಮೆಯನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಶಾಂತ್​ ಸಿಂಗ್​ ಆತ್ಮಹತ್ಯೆಯ ನಂತರ ಬಾಲಿವುಡ್​ನ ಒಂದು ವರ್ಗ ಮತ್ತು ಸುಶಾಂತ್​ ಅಭಿಮಾನಿಗಳು, ಕರಣ್ ಜೋಹಾರ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕರಣ್​ ಸ್ವಜನಪಕ್ಷಪಾತ ಮಾಡುತ್ತಿರುವುದರಿಂದ ಸುಶಾಂತ್​ರಂತಹವರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಮತ್ತು ಅದೇ ಖಿನ್ನತೆಯಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದರು. ಕರಣ್​ ಮೇಲೆ ಇಷ್ಟೆಲ್ಲಾ ಆರೋಪಗಳು ಕೇಳಿ ಬಂದವಾದರೂ, ರಾಮ್​ಗೋಪಾಲ್​ ವರ್ಮ ಸೇರಿದಂತೆ ಒಂದಿಬ್ಬರು ಅವರ ಸಹಾಯಕ್ಕೆ ನಿಂತಿದ್ದು ಬಿಟ್ಟರೆ, ಮಿಕ್ಕಂತೆ ಬಾಲಿವುಡ್​ ಯಾವ ದೊಡ್ಡ ಸೆಲೆಬ್ರಿಟಿ ಸಹ ಕರಣ್​ ಪರವಾಗಿ ನಿಲ್ಲಲಿಲ್ಲ.

ಇದರಿಂದ ಕರಣ್​ ಬಹಳ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಅವರು ಹಲವರನ್ನು ಅನ್​ಫಾಲೋ ಮಾಡುವ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ. ಆ ನಂತರವೂ ಯಾವಾಗ ಬಾಲಿವುಡ್​ನ ಮಂದಿ ಅವರ ಪರ ನಿಲ್ಲಲಿಲ್ಲವೋ, ಆಗ ಕರಣ್​ ಮಾಮಿ ಮಂಡಳಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈ ವಿಷಯವಾಗಿ ದೀಪಿಕಾ ಪಡುಕೋಣೆ ಸೇರಿದಂತೆ ಕೆಲವರು ಕರಣ್​ ಮನವೊಲಿಸುವುದಕ್ಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net