ಟ್ರೋಲ್​ಗೆ ಹೆದರಿ ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ ಕರಣ್​!

karan-johar-jpg_710x400xt
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವುದರಿಂದ ಬಾಲಿವುಡ್​ನಲ್ಲಿ ಬಹುತೇಕ ಸ್ಟಾರ್ ನಟರ ಮತ್ತು ನಿರ್ಮಾಪಕರಿಗೆ ಆತಂಕ ಶುರುವಾಗಿದೆ. ಈಗಾಗಲೇ 30 ಅಧಿಕ ಮಂದಿಯನ್ನು ಸುಶಾಂತ್​ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಇತ್ತ ನೆಪೋಟಿಸಂ ವಿರುದ್ಧವಾಗಿ ನೆಟ್ಟಿಗರು ದೊಡ್ಡ ಅಭಿಯಾನವನ್ನೇ ಶುರುಮಾಡಿದ್ದು, ಕರಣ್​ ಜೋಹರ್​, ಆಲಿಯಾ ಭಟ್​, ಮಹೇಶ್​ ಭಟ್​, ಸಲ್ಮಾನ್​ ಖಾನ್​ ಸೇರಿ ಹಲವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್​ಸೈಡರ್ ವರ್ಸಸ್​ ಔಟ್​ಸೈಡರ್ಸ್​ ಎಂಬ ಎರಡು ಬಣಗಳನ್ನು ಮಾಡಿ, ಸ್ಟಾರ್ ಕುಟುಂಬದಿಂದ ಬಂದ ಕುಡಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳಲಾಗುತ್ತಿದೆ. ಈ ಸ್ಥಿತಿ ಕಂಡು ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್ ಅಕ್ಷರಶಃ ಕುಗ್ಗಿ ಹೋಗಿದ್ದಾರಂತೆ. ಅದ್ಯಾವ ಮಟ್ಟಿಗೆ ಅಂದರೆ, ಒಬ್ಬರೆ ಅಳುವುದಕ್ಕೆ ಶುರುಮಾಡಿದ್ದಾರಂತೆ!

ಹೌದು, ಸುಶಾಂತ್​ ನಿಧನರಾಗಿ ಮೂರು ವಾರಗಳು ಕಳೆದಿವೆ. ಆದರೆ, ಕರಣ್​ ಜೋಹರ್​ ವಿರುದ್ಧದ ಟ್ರೋಲ್​ಗಳು ಮಾತ್ರ ನಿಲ್ಲುತ್ತಿಲ್ಲ. ಮಾತನಾಡಿಸಿದರೂ ಯಾರ ಮಾತನ್ನೂ ಕೇಳುತ್ತಿಲ್ಲವಂತೆ ಕರಣ್​. ಆಪ್ತರು ಕರೆ ಮಾಡಿದರೂ, ಅವರಿಗೂ ಸ್ಪಂಧಿಸುತ್ತಿಲ್ಲವಂತೆ. ಸದ್ಯ ಕರಣ್​ ವಿರುದ್ಧ ಟ್ರೋಲ್​ಗಳು ಹೆಚ್ಚಾಗುತ್ತಿದ್ದಂತೆ, ಅವರ ಆರೋಗ್ಯದಲ್ಲೂ ಒಂದಷ್ಟು ಏರುಪೇರುಗಳಾಗಿವೆಯಂತೆ. ಖಿನ್ನತೆಗೆ ಜಾರಿ, ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ ಎಂದು ಕರಣ್​ ಆಪ್ತರು ಮಾಹಿತಿ ಹೊರಹಾಕಿದ್ದಾರೆ.

ಕರಣ್​ಗೆ ಯಾರೆಲ್ಲ ಆಪ್ತರಿದ್ದರೂ ಅವರೆಲ್ಲರನ್ನೂ ನೆಟ್ಟಿಗರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಸ್ವತಜಪಕ್ಷಪಾತದ ಬಗ್ಗೆ ಅವರಿಗೂ ಚಾಟಿ ಬೀಡುತ್ತಿದ್ದಾರೆ. ಇದೆಲ್ಲದ್ದರಿಂದ ನೊಂದಿರುವ ಕರಣ್​, ನಿತ್ಯ ಕಣ್ಣೀರು ಹಾಕುತ್ತಿದ್ದಾರಂತೆ. ಕರಣ್​ ಅವರ ಅವಳಿ ಮಕ್ಕಳನ್ನು ಹತ್ಯೆ ಮಾಡುವ ಬೆದರಿಕೆ ಹಾಕಲಾಗಿದ್ದು, ಅದಕ್ಕೂ ಅವರು ಬೇಸರ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತವಲಯ ಹೇಳಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net