ರಿಷಬ್​ ಶೆಟ್ಟಿ ನಿರ್ದೇಶನದ 'ಕಾಂತಾರ' ಟ್ರೇಲರ್​ಗೆ ಮೆಚ್ಚುಗೆ ...

Kantara - Final
Published on

ಬೆಂಗಳೂರು: ರಿಷಬ್​ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರವು ಸೆ. 30ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಸೋಮವಾರ ಬೆಳಿಗ್ಗೆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಕಾಂತಾರ' ಎಂದರೆ ನಿಗೂಢವಾದ ಕಾಡು.‌ ಪ್ರಕೃತಿ ಹಾಗೂ ಮನುಷ್ಯನ ನಡುವಿನ ಅವಿನಾಭಾವ ಸಂಬಂಧವನ್ನು ಜಾನಪದ ಸೊಗಡಿನ ಮೂಲಕ ತೋರಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ. ಭೂಮಿಯ ಸುತ್ತ ಈ ಕಥೆ ನಡೆಯುತ್ತದೆ. ದಕ್ಷಿಣ ಕನ್ನಡದ ಭೂಮಿ, ಪರಶುರಾಮ ಸೃಷ್ಟಿ ಎಂದೆ ಪ್ರಸಿದ್ದಿ. ಈ ಭಾಗದಲ್ಲಿ ನಡೆಯುವ ದೈವಾರಾಧನೆ, ಕಂಬಳ ಮುಂತಾದ ಜಾನಪದ ಕ್ರೀಡೆಗಳನ್ನು 'ಕಾಂತಾರ' ಚಿತ್ರದಲ್ಲಿ ನೋಡಬಹುದಾಗಿದೆ.

ಶಿವ ಹಾಗೂ ಮುರಳಿಧರ ಎಂಬ ಮುಖ್ಯಪಾತ್ರಗಳಿದ್ದು, ಶಿವನಾಗಿ ರಿಷಬ್ ಶೆಟ್ಟಿ, ಮುರಳಿಧರ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಅಚ್ಯುತ್​ ಕುಮಾರ್, ಸಪ್ತಮಿ ಗೌಡ, ಪ್ರಮೋದ್​ ಶೆಟ್ಟಿ, ವಿನಯ್​ ಬಿಡ್ಡಪ್ಪ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅಜನೀಶ್​ ಲೋಕನಾಥ್​ ಅವರ ಸಂಗೀತ ಮತ್ತು ಅರವಿಂದ್​ ಎಸ್. ಕಶ್ಯಪ್​ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net