‘ಕನ್ನಡಿಗ ರವಿಚಂದ್ರನ್!

Ravichandran vvani
Published on

ಜಟ್ಟ’ ಸಿನಿಮಾ ಖ್ಯಾತಿಯ ನಿರ್ದೇಶಕ ಬಿ.ಎಂ. ಗಿರಿರಾಜ್ ನಿರ್ದೇಶನದ ಚಿತ್ರದಲ್ಲಿ ರವಿಚಂದ್ರನ್ ನಟಿಸುತ್ತಾರೆ ಎಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತು. ಇದೀಗ ಆ ಚಿತ್ರದ ಕೆಲಸಗಳು ಚುರುಕುಗೊಂಡಿವೆ. ವಿಜಯದಶಮಿ ದಿನದಂದು ಸೆಟ್ಟೇರುವ ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಕನ್ನಡಿಗ’ ಎಂಬ ಶೀರ್ಷಿಕೆ ಇಡಲಾಗಿದೆ.

1850ರ ಬ್ರಿಟಿಷ್ ಮತ್ತು ಪೋರ್ಚುಗೀಸರ ಆಳ್ವಿಕೆಯ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯಲ್ಲಿ ಕನ್ನಡದ ವಿದ್ವಾಂಸನಾಗಿ ರವಿಚಂದ್ರನ್ ನಟಿಸಲಿದ್ದಾರೆ. ವಿಶೇಷ ಏನೆಂದರೆ ಖ್ಯಾತ ನಟ ಟಾಮ್ ಅಲ್ಟರ್ ಅವರ ಪುತ್ರ ಜೇಮಿ ಅಲ್ಟರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದು, ಅವರಿಲ್ಲಿ ಜಾರ್ಜ್ ಫರ್ಡಿನಾಂಡ್ ಕಿಟೆಲ್ ಪಾತ್ರ ಮಾಡಲಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡಿದ ನಿರ್ದೇಶಕ ಗಿರಿರಾಜ್, ‘ಒಂದಷ್ಟು ಅಧ್ಯಯನ ನಡೆಸಿ, ನೈಜ ಘಟನೆಯೊಂದನ್ನು ಸಿನಿಮಾ ಮೂಲಕ ತೆರೆಮೇಲೆ ತರುವ ಪ್ರಯತ್ನವಿದು. ಬರಹಗಾರನ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ, ಕನ್ನಡ ಭಾಷೆಯ ಉಳಿವಿಗಾಗಿ ಹೇಗೆ ಶ್ರಮಿಸುತ್ತಾನೆ ಎಂಬುದೇ ಈ ಚಿತ್ರದ ಕಥೆ’ ಎಂದು ಚಿತ್ರದ ವಿವರ ನೀಡುತ್ತಾರೆ. ಅ. 26ರಂದು ‘ಕನ್ನಡಿಗ’ ಚಿತ್ರಕ್ಕೆ ಚಾಲನೆ ಸಿಗಲಿದೆ. ಮೊದಲ ಹಂತವಾಗಿ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು, ಒಂದಷ್ಟು ಸೆಟ್​ಗಳನ್ನೂ ಈ ಚಿತ್ರಕ್ಕಾಗಿ ಸಿದ್ಧಪಡಿಸಿಲಿದೆ ಚಿತ್ರತಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net