ಮುಂಬೈ ಸಮೀಪದ ಅಲಿಬಾಗ್​ನಲ್ಲಿ ಆಸ್ತಿ ಖರೀದಿಸಿದ ನಟ ಯಶ್​-ರಾಧಿಕಾ ಪಂಡಿತ್​; ಪ್ರಾಪರ್ಟಿಯ ಮೌಲ್ಯ ಎಷ್ಟು ಗೊತ್ತಾ?.. Yash Radhika Pandit

 Yash Radhika Pandit Alibaug property
Yash Radhika Pandit Alibaug property
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈನಲ್ಲಿ ಐಷಾರಾಮಿ ಆಸ್ತಿ ಖರೀದಿ ಮಾಡಿದ ರಾಕಿಂಗ್​ ಸ್ಟಾರ್​ ಯಶ್​-ರಾಧಿಕಾ ಪಂಡಿತ್
  • ದಿಗ್ಗಜ ಸೆಲಬ್ರೆಟಿಗಳ ಬಂಗಲೆ ಇರುವ ಪ್ರದೇಶದಲ್ಲೇ ಸ್ಯಾಂಡಲ್​ವುಡ್​ ನಟ-ನಟಿ ಹೂಡಿಕೆ
  • ಸಮುದ್ರದ ಕಿನಾರೆಯಲ್ಲಿ ಪ್ರಾಪರ್ಟಿ ಖರೀದಿಸಿದ ಯಶ್​ ಮತ್ತು ರಾಧಿಕಾ ಪಂಡಿತ್​
Yash Radhika Pandit Alibaug property: ಕನ್ನಡದ ಸೂಪರ್​ ಜೋಡಿ ಎನಿಸಿಕೊಂಡಿರುವ ನಟ ಯಶ್​ ಮತ್ತು ನಟಿ ರಾಧಿಕಾ ಪಂಡಿತ್ ಈಗ ಪ್ರಾಪರ್ಟಿ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಟಾಕ್ಸಿಕ್​ ಸಿನಿಮಾ ರಿಲೀಸ್​ಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವ ಹೊತ್ತಲ್ಲೇ ಕರಾವಳಿ ಭಾಗವಾದ ಅಲಿಭಾಗ್​ನಲ್ಲಿ 24 ಕೋಟಿ ಮೌಲ್ಯದ ಸೈಟ್ ಖರೀದಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಕರಾವಳಿ ಭಾಗದಲ್ಲಿ ಸೈಟ್ ಖರೀದಿ

ಅಲಿಬಾಗ್‌ನ ರಾಯಗಡ ಜಿಲ್ಲೆಯ ಕಾಮತ್ ಗ್ರಾಮದಲ್ಲಿರುವ ಕಿಹಿಮ್ ಬೀಚ್​ ಬಳಿಯ ಕೃಷಿ ಭೂಮಿಯನ್ನು ಯಶ್​ ದಂಪತಿ 24 ಕೋಟಿ ರೂ ಕೊಟ್ಟು ಖರೀದಿ ಮಾಡಿದ್ದಾರೆ. ಇದು ಮಹಾರಾಷ್ಟ್ರದ ಜನಪ್ರಿಯ ಪ್ರವಾಸಿ ತಾಣ. ಅಲ್ಲದೆ ಬಾಲಿವುಡ್​​ ನಟ, ನಟಿಯರು, ಕ್ರಿಕೆಟಿಗರು ಇಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್ಸ್​ ಖರೀದಿಸಿದ ಕೃಷಿ ಭೂಮಿಗೆ 1.44 ಕೋಟಿ ಸ್ಟಾಂಪ್​ ಡ್ಯೂಟಿ ಹಾಗೂ 60 ಸಾವಿರ ನೋಂದಣಿ ಶುಲ್ಕ ಪಾವತಿ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ವಹಿವಾಟನ್ನು 2026 ಮೇ18ರಂದು ಅಲಿಬಾಗ್‌ನಲ್ಲಿರುವ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕೃತವಾಗಿ ನೋಂದಾಯಿಸಲಾಗಿದೆ ಎನ್ನಲಾಗಿದೆ.

ಎಷ್ಟಿದೆ ಸೈಟ್ ವಿಸ್ತೀರ್ಣ

ಎರಡು ಕೃಷಿ ಭೂಮಿಯ ಒಟ್ಟು ವಿಸ್ತೀರ್ಣ ಸುಮಾರು 5,289 ಚದರ ಮೀಟರ್ ಇದ್ದು, ಇದರ ಜೊತೆಗೆ ಒಂದು ಮನೆ ಕೂಡ ಸೇರಿದೆ ಎಂದು ವರದಿಯಾಗಿದೆ. ಈ ಜಮೀನನ್ನು ಸೆಕ್ಷನ್​7ರಡಿ ಕೃಷಿ ಭೂಮಿ ಎಂದು ನೋಂದಾಯಿಸಲಾಗಿದೆ ಎಂದು ವರದಿ ಮಾಡಲಾಗಿದೆ.

ಬಾಲಿವುಡ್​ ನಟರ ನೆಚ್ಚಿನ ತಾಣ

ಅಲಿಬಾಗ್​​​ ಮುಂಬೈಗೆ ಸಮೀಪ ಹಾಗೂ ಸುಂದರ ತಾಣವಾಗಿರುವ ಕಾರಣ ಹಲವಾರು ಬಾಲಿವುಡ್​ ನಟ ನಟಿಯರು ಇಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಅಮಿತಾಬ್​ ಬಚ್ಚನ್, ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಕೃತಿ ಸನೂನ್, ಕಾರ್ತಿಕ್​ ಆರ್ಯನ್​ ಕೊಹ್ಲಿ ಸೇರಿದಂತೆ ಹಲವರು ಹೂಡಿಕೆ ಮಾಡಿದ್ದಾರೆ. ಈಗ ಆ ಸಾಲಿನಲ್ಲಿ ಯಶ್​ ಮತ್ತು ರಾಧಿಕಾ ಪಂಡಿತ್​ ಸೇರಿದ್ದಾರೆ.

ಯಶ್​-ರಾಧಿಕಾ ವೈವಾಹಿಕ ಜೀವನ

ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಹೆಚ್ಚಾಗಿ ಪರಿಚಿತರಾದ ನಟ ಯಶ್​ ಮತ್ತು ರಾಧಿಕಾ ಪಂಡಿತ್​​, ಮಿಸ್ಟರ್​ ಅಂಡ್​ ಮಿಸಸ್​ ರಾಮಾಚಾರಿ ಸಿನಿಮಾ ನಂತರ ಕ್ಯೂಟೆಸ್ಟ್​ ಜೋಡಿಗಳಾದರು. ಪ್ರೇಮಿಗಳು ಹೀಗಿರಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ನಂತರ, ಇಬ್ಬರು ಒಟ್ಟಾಗಿ ಮದುವೆಯಾಗಲಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಕೊನೆಗೆ 2016ರಲ್ಲಿ ಹಸೆಮಣೆ ಏರಿದರು. ಸದ್ಯ ಯಶ್​ ಟಾಕ್ಸಿಕ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ರಾಧಿಕಾ ಪಂಡಿತ್​ ಅವರು ಮಕ್ಕಳ ಆರೈಕೆಯಲ್ಲಿ ತಲ್ಲೀನರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net