ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್: ಈ ವಾರ ತೆರೆಗೆ ಬರಲಿದೆ ವಿಭಿನ್ನ ಪ್ರೇಮಕಥೆ

sanjana
Published on

ಬೆಂಗಳೂರು: ರಾಧಾ ಮತ್ತು ರಮಣ ಇಬ್ಬರು ಪ್ರೇಮಿಗಳು. ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಪ್ರೀತಿಸುವವರು. ಆದರೆ ರಮಣ ತಪ್ಪಿಸಿಕೊಂಡುಬಿಡುತ್ತಾನೆ. ರಾಧಾ ಆತನ ಹುಡುಕಾಟಕ್ಕಿಳಿಯುತ್ತಾಳೆ. ಆತ ಕಣ್ಮರೆಯಾಗಲು ಕಾರಣವೇನು? ಎಲ್ಲಿಗೆ ಹೋಗಿರುತ್ತಾನೆ? ಅಪಹರಣವಾಗಿರುತ್ತಾನಾ? ರಾಧಾಗೆ ರಮಣ ಸಿಗುತ್ತಾನಾ? ಹೀಗೆ ಪ್ರೀತಿ-ಪ್ರೇಮ, ಹುಡುಗಾಟ-ಹುಡುಕಾಟಗಳ ಸುತ್ತ ಸುತ್ತುವ ವಿಭಿನ್ನ ಪ್ರೇಮಕಥೆ ಹೊತ್ತು ತಂದಿದ್ದಾರೆ ನಿರ್ದೇಶಕ ಎಂ.ಎನ್. ಶ್ರೀಕಾಂತ್.

ಈ ಚಿತ್ರದ ಹೆಸರು ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’. ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ನಾಯಕ ರಮಣನ ಪಾತ್ರದಲ್ಲಿ ರಾಘವ್ ಹಾಗೂ ನಾಯಕಿ ರಾಧಾ ಪಾತ್ರದಲ್ಲಿ ಸಂಜನಾ ಬುರ್ಲಿ ನಟಿಸಿದ್ದಾರೆ.

ಸಂಜನಾ ಜತೆಗೆ ರೇಖಾ, ಗೋಪಿನಾಥ್ ಭಟ್, ಚಿರಾಗ್, ಪ್ರದೀಪ್ ತಿಪಟೂರು, ಗುರು ಹೆಗಡೆ, ಯಶಸ್ವಿ ಶಂಕರ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವನೀತ್ ಸಂಗೀತ ನಿರ್ದೇಶನ, ವಿಶ್ವಜಿತ್ ರಾವ್ ಛಾಯಾಗ್ರಹಣವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net