ಕನ್ನಡದ ಯೂ ಟರ್ನ್ ಬಂಗಾಳಿಯಲ್ಲಿ ಫ್ಲೈ ಓವರ್

Fly over
Published on

ಬೆಂಗಳೂರು: ಲೂಸಿಯಾ ಪವನ್ ಕುಮಾರ್ ನಿರ್ದೇಶನದ ‘ಯೂ ಟರ್ನ್’ ಚಿತ್ರಕ್ಕೆ ಕನ್ನಡದಲ್ಲಿ 2016ರಲ್ಲಿ ತೆರೆಕಂಡು ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಅಷ್ಟೇ ಅಲ್ಲ ಹಲವು ಭಾಷೆಗಳಿಗೂ ರಿಮೇಕ್ ಆಗಿ ಆ ಭಾಷಿಕರನ್ನೂ ಸೆಳೆದಿತ್ತು. ಇದೀಗ ಹೊಸದಾಗಿ ಬಂಗಾಳಿ ಭಾಷೆಗೂ ‘ಯೂ ಟರ್ನ್’ ಚಿತ್ರ ರಿಮೇಕ್ ಆಗಿದೆ. ಅಲ್ಲಿ ‘ಪ್ಲೈಓವರ್’ ಹೆಸರಿನಲ್ಲಿ ಇದೇ ಏ. 1ಕ್ಕೆ ಬಿಡುಗಡೆ ಆಗುತ್ತಿದೆ. ಅಭಿಮನ್ಯು ಮುಖರ್ಜಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಫ್ಲೈಓವರ್’ ಚಿತ್ರದಲ್ಲಿ ಕೋಯಲ್ ಮಲ್ಲಿಕ್ ಶ್ರದ್ಧಾ ಶ್ರೀನಾಥ್ ಮಾಡಿದ್ದ ಪಾತ್ರ ನಿಭಾಯಿಸಿದ್ದಾರೆ.

ಅದಾದ ಬಳಿಕ ಸ್ವತಃ ಪವನ್, ತೆಲುಗು ಮತ್ತು ತಮಿಳು ರಿಮೇಕ್​ಗೆ ಆಕ್ಷನ್ ಕಟ್ ಹೇಳಿದರು. ಅಲ್ಲಿ ನಾಯಕಿಯಾಗಿ ಸಮಂತಾ ಅಕ್ಕಿನೇನಿ ನಟಿಸಿದರು. ಶ್ರೀಲಂಕನ್ ಮತ್ತು ಪಿಲಿಪಿನೋ ಭಾಷೆಯಲ್ಲಿಯೂ ಯೂಟರ್ನ್ ರಿಮೇಕ್ ಆಗಿ ತೆರೆಕಂಡು ಮೆಚ್ಚುಗೆ ಪಡೆಯಿತು. ಇದೀಗ ಬಂಗಾಳಿ ಸರದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net