ಶುಭ ಬಿಗ್​ಬಾಸ್​ನಲ್ಲಿದ್ದರೆ, ಆಕೆಯ ಭಾವಿ ಪತಿ ಏನು ಮಾಡುತ್ತಿದ್ದಾರೆ ಗೊತ್ತಾ? ಸುದೀಪ್​ ಬಿಚ್ಚಿಟ್ಟ ಸತ್ಯ ಏನು?

shubha
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8 ರೋಚಕವಾಗಿ ಸಾಗುತ್ತಿದೆ. ಹಾಸ್ಯ ಕಲಾವಿದ ಮಂಜು ಪಾವಗಡ ಮನೆಯನ್ನು ಸದಾ ನಗಿಸುವಂತೆ ಮಾಡುತ್ತಿದ್ದರೆ, ನಟಿ ಶುಭ ಪೂಂಜಾ ಮನೆಯ ಜನರು ಮತ್ತು ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಭಾನುವಾರದಂದು ಗೀತಾ ಭಟ್​ ಮನೆಯಿಂದ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ. ಅದಕ್ಕೂ ಮೊದಲು ಮನೆ ಮಂದಿಯೊಂದಿಗೆ ಮಾತನಾಡಿದ ಕಿಚ್ಚ ಸುದೀಪ್​, ಶುಭ ಪೂಂಜಾ ತಲೆಗೆ ಹುಳ ಬಿಟ್ಟಿದ್ದಾರೆ. ಶುಭ ಮತ್ತು ಅವರ ಭಾವಿ ಪತಿ ಬಗ್ಗೆ ಮಾತನಾಡಿದ ಸುದೀಪ್​, ಶುಭ ಅವರೇ ಒಂದು ವೇಳೆ ನೀವು 100 ದಿನ ಇದೇ ಮನೆಯಲ್ಲಿ ಇದ್ದರೆ ನಿಮ್ಮ ಬಾವಿ ಪತಿಯನ್ನು ಎಷ್ಟು ಮಿಸ್​ ಮಾಡಿಕೊಳ್ಳುತ್ತೀರಿ ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಶುಭ, ನನಗೇನು ತೊಂದರೆಯಾಗುವುದಿಲ್ಲ ಆದರೆ ಅವರು ನನ್ನ ತುಂಬಾ ಮಿಸ್​ ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸುವ ಸುದೀಪ್​ "ಓ ಭ್ರಮೆ" ಎಂದು ನಗೆ ಚಟಾಕಿ ಹಾರಿಸುತ್ತಾರೆ.

ಶುಭ ಅವರೇ, ನಿಮ್ಮನ್ನು ಅವರು ಮಿಸ್​ ಮಾಡಿಕೊಳ್ಳುತ್ತಾರೆ ಎಂದು ನೀವೆಂದುಕೊಂಡಿದ್ದೀರಿ. ಆದರೆ ನೀವು ಇಲ್ಲಿರುವಾಗ ಆ ನೋವನ್ನು ಮರೆಸಲು ಅವರಿಗೆ ಬೇರಾದರೂ ಬೇಕಲ್ಲವೇ ಎಂದು ಪ್ರಶ್ನಿಸುತ್ತಾರೆ. ಇಷ್ಟಕ್ಕೆ ತಲೆ ಹುಳ ಬಿಟ್ಟುಕೊಳ್ಳುವ ಶುಭ, ನೀವೇನಾದರೂ ಅವನನ್ನು ಬೇರೊಬ್ಬ ಹುಡುಗಿ ಜತೆ ನೋಡಿದಿರಾ ಎಂದು ಕೇಳುತ್ತಾರೆ. ಈ ರೀತಿ ಒಂದಿಷ್ಟು ಸಮಯ ಶುಭರ ಕಾಲೆಳೆದ ಸುದೀಪ್​ ನಂತರ ನಿಜ ವಿಚಾರಕ್ಕೆ ಬರುತ್ತಾರೆ. ನನಗೆ ನಿಮ್ಮ ಭಾವಿ ಪತಿಯ ಮುಖವೇ ನೆನಪಿಲ್ಲ, ಇನ್ನು ಏನು ಮಾಡುತ್ತಿದ್ದಾರೆ ಎಂದು ನನಗೆಲ್ಲಿ ಗೊತ್ತಿರುತ್ತದೆ ಎಂದು ಗೊಂದಲಕ್ಕೆ ತೆರೆ ಎಳೆಯುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net