

ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವು ದ್ವಿಪಾತ್ರಗಳಿರುವ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಮೊದಲ ದ್ವಿಪಾತ್ರಗಳಿದ್ದ ಕನ್ನಡ ಚಿತ್ರವೆಂದರೆ ಅದು ‘ಸತಿಶಕ್ತಿ’.
1963ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ನಿರ್ವಿುಸಿ-ನಿರ್ದೇಶಿಸಿದ್ದರು. ವಿರೂಪಾಕ್ಷ ಮತ್ತು ರಕ್ತಾಕ್ಷ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಡಾ. ರಾಜಕುಮಾರ್ ಕಾಣಿಸಿಕೊಂಡಿದ್ದರು. ನಂತರದ ವರ್ಷಗಳಲ್ಲಿ ‘ಎಮ್ಮೆ ತಮ್ಮಣ್ಣ’, ‘ದಾರಿ ತಪ್ಪಿದ ಮಗ’, ‘ಬಬ್ರುವಾಹನ’, ‘ರವಿ ಚಂದ್ರ’, ‘ಅದೇ ಕಣ್ಣು’, ‘ನಾನೊಬ್ಬ ಕಳ್ಳ’ ಸೇರಿದಂತೆ ಹಲವು ಚಿತ್ರಗಳಲ್ಲಿ ಡಾ. ರಾಜಕುಮಾರ್ ದ್ವಿಪಾತ್ರಗಳಲ್ಲಿ ನಟಿಸಿದರು.
ಅಷ್ಟೇ ಅಲ್ಲ, ‘ಕುಲ ಗೌರವ’ ಮತ್ತು ‘ಶಂಕರ್ ಗುರು’ ಚಿತ್ರಗಳಲ್ಲಿ ಅವರು ತ್ರಿಪಾತ್ರಗಳಲ್ಲೂ ನಟಿಸಿದ್ದಾರೆ. ‘ಸತಿ ಶಕ್ತಿ’ ಚಿತ್ರದಿಂದ ಶುರುವಾದ ದ್ವಿಪಾತ್ರ ಚಿತ್ರಗಳ ಟ್ರೆಂಡ್ ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ.