'ವಿಕಿಪೀಡಿಯ' ಚಿತ್ರದ ಟ್ರೇಲರ್ ಬಿಡುಗಡೆ ... ಆಗಸ್ಟ್ 26ಕ್ಕೆ ಚಿತ್ರ ತೆರೆಗೆ

Vikipedia - Final
Published on

ಬೆಂಗಳೂರು: ಕಿರುತೆರೆ ವೀಕ್ಷಕರಿಗೆ ಯಶವಂತ್​ ಹೊಸಬರಲ್ಲ. ಈಗಾಗಲೇ ಅವರು 'ಸತ್ಯಂ ಶಿವಂ ಸುಂದರಂ', 'ಒಂದೂರಲ್ಲಿ ರಾಜರಾಣಿ', 'ಮಹಾದೇವಿ', 'ಶಾಂತಂಪಾಪಂ', 'ಯಾರೇ ನೀ‌ ಮೋಹಿನಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಅವರು ಹೀರೋ ಆಗಿ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಆ ಚಿತ್ರದ ಟೀಸರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

ಅಂದಹಾಗೆ, ಯಶವಂತ್​ ಹೀರೋ ಆಗಿ ನಟಿಸಿರುವ ಚಿತ್ರದ ಹೆಸರು 'ವಿಕಿಪೀಡಿಯಾ'. ಹೆಸರು ಕೇಳುತ್ತಿದ್ದಂತೆಯೇ ಆನ್​ಲೈನ್​ ಎನ್​ಸೈಕ್ಲೋಪೀಡಿಯಾ ನೆನಪಿಗೆ ಬರಬಹುದು. ಈ ಚಿತ್ರ ಯಾವುದರ ಕುರಿತು ಇರಬಹುದು ಎಂಬ ಪ್ರಶ್ನೆ ಸಹಜ.

ಈ ಕುರಿತು ಮಾತನಾಡುವ ಯಶವಂತ್​, 'ಪ್ರಪಂಚದಲ್ಲಿ ಎರಡು ರೀತಿ ಜನ ಅಲ್ಲ. ಮೂರು ರೀತಿ ಜನ ಇರ್ತಾರೆ. ಆ ಮೂರನಯವರೇ ನಾವು. ವಿಕಿಪೀಡಿಯದಲ್ಲಿ ತಮ್ಮ ಹೆಸರು ಬರಲು ಹೊರಟವರ ಗುಂಪಿಗೆ ನಾನು ನನ್ನ ತಂಡ ಸೇರುತ್ತದೆ ಅನಿಸುತ್ತದೆ. ಕಷ್ಟಪಟ್ಟು ಮೂರು ವರ್ಷ ಸಿ‌ನಿಮಾ ಮಾಡಿದ್ದೇವೆ. ಈ ತಿಂಗಳ 26ಕ್ಕೆ ತೆರೆಗೆ ಬರುತ್ತಿದೆ' ಎನ್ನುತ್ತಾರೆ

'ವಿಕಿಪೀಡಿಯಾ' ಚಿತ್ರಕ್ಕೆ ಸೋಮು ಹೊಯ್ಸಳ ಆಕ್ಷನ್ ಕಟ್ ಹೇಳಿದ್ದು, ಇದು ಇವರಿಗೆ ಚೊಚ್ಚಲ ಸಿನಿಮಾವಾಗಿದೆ. 'ಡ್ರಾಮಾ, ಎಮೋಷnff, ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ಈ ಚಿತ್ರ ಎಂದರೆ ತಪ್ಪಿಲ್ಲ. ಈ ಚಿತ್ರಕ್ಕೆ ಚಿದಾನಂದ್ ಹೆಚ್ ಕೆ ಛಾಯಾಗ್ರಹಣ, ರಾಕೇಶ್ ಸಂಗೀತ, ರವಿಚಂದ್ರನ್ ಸಿ ಸಂಕಲನವಿದೆ. ರಫ್ ಕಟ್ ಪ್ರೊಡಕ್ಷನ್ ನಡಿ ಈ ಚಿತ್ರಕ್ಕೆ ನಿರ್ಮಾಣವಾಗಿದೆ. ಯಶವಂತ್​ಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net