More

    ಆರು ಭಾಷೆಗಳಲ್ಲಿ ಮೂಡಿಬರಲಿದೆ ಈ ಸಿನಿಮಾ, ‘ಭಗವಾನ್ ಶ್ರೀ ನಿತ್ಯಾನಂದ..’

    ಬೆಂಗಳೂರು: ‘The endless one ಭಗವಾನ್ ಶ್ರೀ ನಿತ್ಯಾನಂದ..’
    ಇದು ಆರು ಭಾಷೆಗಳಲ್ಲಿ ಮೂಡಿ ಬರಲಿರುವ ಸಿನಿಮಾದ ಶೀರ್ಷಿಕೆ. ಇಂದು ಈ ಚಿತ್ರದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಆಗಿದ್ದು, ಚಿತ್ರದ ಕುರಿತು ಕುತೂಹಲ ಹುಟ್ಟಿಸಿದೆ. ಅವಧೂತ ವಿನಯ್ ಗುರೂಜಿ ಅವರು ಇಂದು ಬೆಂಗಳೂರಿನಲ್ಲಿ ಈ ಚಿತ್ರದ ಟೈಟಲ್​ ಲಾಂಚ್ ಮಾಡಿ, ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

    ಭಗವಾನ್ ಹೆಸರಿನಲ್ಲಿ ಕಿರುಚಿತ್ರಗಳಷ್ಟೇ ಬಂದಿವೆ. ಈಗ ಅವರ ವಿಚಾರಗಳನ್ನು ಒಳಗೊಂಡ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾ ಬರಲಿದ. ಭಗವಾನ್​ನಲ್ಲಿ ಒಂದೇ ತತ್ವ, ಅದು ಮನುಷ್ಯತ್ವ. ಅಲ್ಲಿ ಮತಕ್ಕೆ ಜಾಗವಿಲ್ಲ. ಮನುಷ್ಯತ್ವಕ್ಕಿಂತ ದೊಡ್ಡ ತತ್ವ ಮತ್ತೊಂದಿಲ್ಲ. ಶಿರಡಿಬಾಬಾ ಸೀರಿಯಲ್ ಬಂದಮೇಲೆ ಬಾಬಾ ಬಗ್ಗೆ ಗೊತ್ತಾಗಿದ್ದು, ಶ್ರೀನಿವಾಸ ಕಲ್ಯಾಣ ಸಿನಿಮಾ ಆದ್ಮೇಲೆ ತಿರುಪತಿ ಬಗ್ಗೆ ಗೊತ್ತಾಯ್ತು. ಅದೇ ರೀತಿ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾ ಹಲವು ವಿಷಯಗಳನ್ನು ಜನರಿಗೆ ತಲುಪಿಸಲಿದೆ ಎಂದು ವಿನಯ್ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.

    ಸಿನಿಮಾಗೆ The endless one ಭಗವಾನ್ ಶ್ರೀ ನಿತ್ಯಾನಂದ ಎಂಬ ವಿಭಿನ್ನ ಶೀರ್ಷಿಕೆ‌ ಇಡಲಾಗಿದ್ದು, ಖೋಡೇ ಕುಟುಂಬದ ಕೃಷ್ಣ ಕೆ.ಆರ್. ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಮ್ಮ ಕುಟುಂಬ ಭಗವಾನ್ ನಿತ್ಯಾನಂದರ ಸೇವೆ ಸಲ್ಲಿಸಿಕೊಂಡು ಬರುತ್ತಿದೆ. ಈ ಸಿನಿಮಾ ಮಾಡುವ ಮೂಲಕ ಚಿಕ್ಕದೊಂದು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ಕೃಷ್ಣ ಕೆ.ಆರ್. ತಿಳಿಸಿದರು.

    ಗುಲಾಬ್ ಪ್ರೊಡಕ್ಷನ್ ಮೂಲಕ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಕನ್ನಡ‌ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್​ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ. ಸದ್ಯದಲ್ಲಿಯೇ ತಾರಾಗಣ ಹಾಗೂ ತಂತ್ರಜ್ಞರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಅಂದಹಾಗೆ ಈ ಚಿತ್ರಕ್ಕೂ ಬಿಡದಿಯ ನಿತ್ಯಾನಂದಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯದೇ ಕಥೆ ಒಳಗೊಂಡಿದೆ.

    ಆರು ಭಾಷೆಗಳಲ್ಲಿ ಮೂಡಿಬರಲಿದೆ ಈ ಸಿನಿಮಾ, 'ಭಗವಾನ್ ಶ್ರೀ ನಿತ್ಯಾನಂದ..'

    ಯಾರದು..? ಚರ್ಚೆ ಆಗುತ್ತಿದೆ ಬೆಡ್​ರೂಮ್ ವಿಷಯ: ಇಂದು ರಾತ್ರಿ ಕಳೆಗಟ್ಟಲಿದ್ಯಾ ಬಿಗ್​ಬಾಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts