ಮಯೂರ್​ ಪಟೇಲ್​ ಅಭಿನಯದ ರಾಜೀವ ಚಲನಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಯಶಸ್ಸು

RAJEEVA
Published on

ಬೆಂಗಳೂರು: ಮಯೂರ್​ ಪಟೇಲ್​ ಅಭಿನಯದ ರಾಜೀವ ಚಲನಚಿತ್ರ ರಾಜ್ಯಾದ್ಯಂತ ತೆರೆ ಕಂಡಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಮೊದಲನೇ ದಿನ ರಾಜೀವನನ್ನು ವೀಕ್ಷಿಸಿದ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ವಿಭಿನ್ನವಾಗಿ ಮೂಡಿ ಬಂದಿರುವ ಚಿತ್ರದ ಬಗ್ಗೆ, ಚಿತ್ರ ಕತೆಯ ಬಗ್ಗೆ ಶ್ಲಾಘಿಸುತ್ತಿದ್ದಾರೆ.

ಹಳ್ಳಿ ಹಂದರದ ಕತೆಯುಳ್ಳ ರಾಜೀವ ಚಲನಚಿತ್ರ, ರೈತನ ಬದುಕನ್ನು, ಬರಗಾಲವನ್ನು, ಬರ ಮೆಟ್ಟಿ ನಿಲ್ಲುವ ರೈತ ಹಾಗೂ ರಾಜಕೀಯ ಪರಿಸ್ಥಿತಿಯನ್ನು ಬಿಂಬಿಸುತ್ತದೆ. ಇದಕ್ಕೆ ಪ್ರೇಕ್ಷಕ ಫಿದಾ ಆಗಿದ್ದಾನೆ.

ರಾಜೀವ (ಮಯೂರ್ ಪಟೇಲ್) ಒಬ್ಬ ವಿದ್ಯಾವಂತ. ಕೃಷಿಕನಾಗಿ, ವಿಭಿನ್ನ ಪ್ರಯೋಗಗಳ ಮೂಲಕ ಸರ್ಕಾರದ ಗಮನ ಸೆಳೆಯುತ್ತಾನೆ. ಖುದ್ದು ಮುಖ್ಯಮಂತ್ರಿಗಲೇ ಹಳ್ಳಿಗೆ ಆಗಮಿಸುತ್ತಾರೆ. ಮಾತ್ರವಲ್ಲ ಆತನ ಮೂವರು ಸೋದರರಲ್ಲಿ ಒಬ್ಬನಿಗೆ ಚುನಾವಣೆಗೆ ನಿಲ್ಲಲು ಟಿಕೆಟ್, ಇನ್ನೊಬ್ಬನನ್ನು ಆ ಊರಿನ ಜಿಲ್ಲಾಧಿಕಾರಿ, ಮತ್ತೊಬ್ಬನಿಗೆ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ನೇಮಿಸುತ್ತಾರೆ.

ಚುನಾವಣೆಗೆ ನಿಂತ ಸೋದರ ಶಾಸಕನಾದ ಮೇಲೆ ಏನಾಯಿತು. ಮುಂದೆ ನಡೆಯುವ ರಾಜಕೀಯದ ಆಟಗಳು ಏನು? ಅದಕ್ಕೆ ರಾಜೀವ ಸಮಸ್ಯೆಗಳನ್ನು ಬಗೆಹರಿಸುವ ಪರಿಯನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ಪರದೆಗೆ ತಂದಿದ್ದಾರೆ. ನಾಯಕ ನಟಿಯಾಗಿ ಅಕ್ಷತಾ ಗಮನ ಸೆಳೆಯುತ್ತಾರೆ.

ಕೆ. ಕಿರಣ್, ಬಿ.ಎಂ. ರಮೇಶ್ ನಿರ್ಮಾಣದಲ್ಲಿ ಮೂಡಿ ಬಂದಿರುವ ರಾಜೀವ ಚಲನಚಿತ್ರವನ್ನು ಕನ್ನಡದ ಪ್ರೇಕ್ಷಕರು ತುಂಬು ಹೃದಯದಿಂದ ರಾಜ್ಯಾದ್ಯಂತ ಸ್ವಾಗತಿಸಿದ್ದಾರೆ. ಶಂಕರ್ ಅಶ್ವತ್ಥ್, ಮದನ್ ಪಟೇಲ್ ಮತ್ತಿತರರು ಪಾತ್ರ ವರ್ಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net