ಹೊಸಬರ ಹೊಸ ಅಲೆ; ವಿನೂತನ, ಪ್ರಯೋಗಾತ್ಮಕ ಚಿತ್ರಗಳಲ್ಲಿ ಗಮನ ಸೆಳೆಯುತ್ತಿರುವ ನಿರ್ದೇಶಕರು

hosa ale
Published on

| ಹರ್ಷವರ್ಧನ್ ಬ್ಯಾಡನೂರು

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸುವರ್ಣಪರ್ವ ಶುರುವಾಗಿದೆ. ‘ಕೆಜಿಎ್’, ‘ಕಾಂತಾರ’, ‘ವಿಕ್ರಾಂತ್ ರೋಣ’, ‘777 ಚಾರ್ಲಿ’ಯಂತಹ ಕನ್ನಡ ಮಣ್ಣಿನ ಸಿನಿಮಾಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿವೆ. ಅದರ ನಡುವೆ ಹೊಸ ಪ್ರತಿಭೆಗಳ ಆಗಮನ ಚಿತ್ರರಂಗದ ಭವಿಷ್ಯದ ಮೇಲಿನ ಭರವಸೆ ಹೆಚ್ಚಿಸಿದೆ. ಈ ವರ್ಷ ರಿಲೀಸ್ ಆದ ಚಿತ್ರಗಳಲ್ಲಿ ‘ಹೊಂದಿಸಿ ಬರೆಯಿರಿ’, ‘ರಾಘು’ ಹಾಗೂ ‘ಡೇರ್‌ಡೆವಿಲ್ ಮುಸ್ತಾಾ’ ಜನಮನ ಸೆಳೆಯುವಲ್ಲಿ ಸಕ್ಸಸ್ ಆಗಿವೆ. ವಿಶೇಷ ಅಂದರೆ, ಈ ಮೂರೂ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವುದು ಹೊಸ ನಿರ್ದೇಶಕರು. ಮೂವರೂ ತಮ್ಮ ಡೆಬ್ಯೂ, ನಡೆಸಿದ ಹೋರಾಟ, ಈಗ ಸಕ್ಸಸ್‌ನ ಖುಷಿಯನ್ನು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.

ಗೆಲುವನ್ನು ಹೊಂದಿಸಿ ಬರೆದ ಜಗನ್ನಾಥ್

ಜಗನ್ನಾಥ್ ಚೊಚ್ಚಲ ನಿರ್ದೇಶನದ ಸಿನಿಮಾ ‘ಹೊಂದಿಸಿ ಬರೆಯಿರಿ’. ಕಳೆದ ೆಬ್ರವರಿಯಲ್ಲಿ ಬಿಡುಗಡೆಯಾದ ಈ ಮಲ್ಟಿಸ್ಟಾರರ್, ಥಿಯೇಟರ್‌ಗಳಲ್ಲಿ 50 ದಿನ ಪೂರೈಸಿದ ಬಳಿಕ, ಏಪ್ರಿಲ್‌ನಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಯಿತು. ಇದೀಗ ಐದು ಕೋಟಿ ನಿಮಿಷಕ್ಕೂ ಅಧಿಕ ಸಮಯ ವೀಕ್ಷಣೆಗೊಂಡಿದೆ. ‘ಜನರಿಗಾಗಿ ಸಿನಿಮಾ ಮಾಡುತ್ತೇವೆ. ಥಿಯೇಟರ್ ಬಳಿಕ, ಇನ್ನಷ್ಟು ಜನರಿಗೆ ತಲುಪಬೇಕಂತ ಓಟಿಟಿಯಲ್ಲಿ ರಿಲೀಸ್ ಮಾಡಿದೆವು. ಅಲ್ಲೂ ಅದ್ಭುತ ರೆಸ್ಪಾನ್ಸ್ ದೊರೆಯಿತು. ಓಟಿಟಿಯಲ್ಲಿ ನೋಡಿದ್ದವರು ಥಿಯೇಟರ್‌ಗೆ ಬಂದಿದ್ದರೆ ನಮಗೆ 15 ಕೋಟಿ ರೂ. ಬಿಜಿನೆಸ್ ಆಗಿರುತ್ತಿತ್ತು. ಜನರನ್ನು ಥಿಯೇಟರ್‌ಗೆ ಕರೆಸಿಕೊಳ್ಳುವುದು ಚಾಲೆಂಜಿಂಗ್ ಆಗಿದೆ. ಓಟಿಟಿಗೆ ಸಿನಿಮಾ ಮಾಡಬೇಕಾ, ಥಿಯೇಟರ್‌ಗೆ ಸಿನಿಮಾ ಮಾಡಬೇಕಾ ಎಂಬ ಗೊಂದಲವೂ ಇದೆ. ಚಿತ್ರಗಳು ಓಟಿಟಿಗೆ ಬಂದ ತಕ್ಷಣ ಪೈರಸಿಯಾಗಿಬಿಡುತ್ತದೆ. ಈ ಎಲ್ಲ ಸವಾಲುಗಳ ನಡುವೆ ಮೊದಲ ಸಿನಿಮಾ ಇಷ್ಟರ ಮಟ್ಟಿಗೆ ರೀಚ್ ಆಗಿರುವುದು ಖುಷಿ ನೀಡಿದೆ. ಪ್ರೇಕ್ಷಕರು ಮಾತ್ರವಲ್ಲ ಚಿತ್ರರಂಗದವರೂ ಸಿನಿಮಾ ಮೆಚ್ಚಿಕೊಂಡರು’ ಎಂದು ಸಂತಸ ಹಂಚಿಕೊಳ್ಳುತ್ತಾರೆ ಜಗನ್ನಾಥ್.

‘ರಾಘು’ ಪ್ರಯೋಗದಲ್ಲಿ ಆನಂದ

ಒಂದೇ ಪಾತ್ರವನ್ನಿಟ್ಟುಕೊಂಡು ಕಮರ್ಷಿಯಲ್ ಸಿನಿಮಾ ಮಾಡುವುದು ಸವಾಲಿನ ಕೆಲಸ. ಮೊದಲ ನಿರ್ದೇಶನದಲ್ಲಿಯೇ ಅಂತಹ ಪ್ರಯೋಗದ ಮೂಲಕ ಗಮನ ಸೆಳೆದವರು ನಿರ್ದೇಶಕ ಆನಂದ್ ರಾಜ್. ‘‘ರಾಘು’ ಕಥೆ ಮಾಡಿದಾಗಲೇ ವಿಭಿನ್ನ ಪ್ರಯತ್ನವಾದ ಕಾರಣ ಜನ ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬ ಪ್ರಶ್ನೆಯಿತ್ತು. ಒಂದೇ ಪಾತ್ರವಿರುವ ವಿಷಯಾಧಾರಿತ ಕಮರ್ಷಿಯಲ್ ಸಿನಿಮಾ. ಆದರೂ ದೊಡ್ಡ ಸೆಟ್‌ಗಳಲ್ಲಿ, ಓಟ್‌ಡೋರ್‌ನಲ್ಲಿ, ಸಾಂಗ್, ಆ್ಯಕ್ಷನ್ ಎಲ್ಲವೂ ಇರುವ ಕಂಪ್ಲೀಟ್ ಪ್ಯಾಕೇಜ್ ಚಿತ್ರ. ಹೀಗಾಗಿಯೇ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆಯಿತು. ಅರ್ಧ ಚಿತ್ರರಂಗ ನಮ್ಮ ಚಿತ್ರದ ಜತೆ ನಿಂತಿದ್ದರು. ಪ್ರೇಕ್ಷಕರೂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಚಿತ್ರ 25 ದಿನ ಪೂರ್ಣಗೊಳಿಸಿದೆ. ಸಿನಿಮಾ ಕಮರ್ಷಿಯಲ್ ಆಗಿಯೂ ಕೈ ಹಿಡಿದಿದೆ. ಒಂದೂವರೆ ತಾಸಿನ ಚಿತ್ರವಾದ ಕಾರಣ ಎಲ್ಲೂ ಬೋರ್ ಅನ್ನಿಸಿಲ್ಲ. ಈಗಾಗಲೇ ಸ್ಯಾಟಲೈಟ್ ಮತ್ತು ಓಟಿಟಿ ಹಕ್ಕುಗಳು ಮಾರಾಟವಾಗಿವೆ’ ಎಂದು ಸಂಭ್ರಮ ವ್ಯಕ್ತಪಡಿಸುತ್ತಾರೆ ಆನಂದ್.

‘ಡೇರ್‌ಡೆವಿಲ್’ ಶಶಾಂಕ್ ಸೋಗಾಲ್

ಕಳೆದ ಎರಡು ವಾರಗಳಿಂದ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿರುವ ಸಿನಿಮಾ, ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ‘ಡೇರ್‌ಡೆವಿಲ್ ಮುಸ್ತಾಾ’. ಶಶಾಂಕ್ ಸೋಗಾಲ್ ನಿರ್ದೇಶನದ ಮೊದಲ ಚಿತ್ರವಿದು. ‘ಮೊದಲಿನಿಂದಲೂ ಸಿನಿಮಾ ಚೆನ್ನಾಗಾಗುತ್ತೆ ಎಂಬ ನಂಬಿಕೆಯಿತ್ತು. ಕಲಾವಿದರು, ತಂತ್ರಜ್ಞರು ಎಲ್ಲರೂ ಹೊಸಬರೇ. ಮಳೆ ನಡುವೆಯೂ ರಿಪೋರ್ಟ್ ಚೆನ್ನಾಗಿದೆ ಎಂದು ವಿತರಕರು ಹೇಳುತ್ತಿದ್ದಾರೆ. ಪ್ರೇಕ್ಷಕರು ಮಾತ್ರವಲ್ಲ ಚಿತ್ರರಂಗದರೂ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಹೊಸಬರಾದ ಕಾರಣ ರಿಲೀಸ್ ಬಗ್ಗೆ ನಮಗೇನೂ ಗೊತ್ತಿರಲಿಲ್ಲ. ಡಾಲಿ ಪಿಕ್ಚರ್ಸ್ ಮೂಲಕ ಧನಂಜಯ ಸಿನಿಮಾ ಪ್ರೆಸೆಂಟ್ ಮಾಡಿದರು. ಕೆಆರ್‌ಜಿ ಸ್ಟುಡಿಯೋಸ್ ವಿತರಣೆ ಮಾಡಿದರು. ಹೀಗೆ ಎರಡು ದೊಡ್ಡ ಸಂಸ್ಥೆಗಳು ನಮ್ಮ ಜತೆ ಕೈಜೋಡಿಸಿದರು. ಇದೀಗ ವಿದೇಶಗಳಲ್ಲೂ ರಿಲೀಸ್ ಮಾಡಿದ್ದೇವೆ. ಟಿವಿ ಮತ್ತು ಓಟಿಟಿ ಮಾತುಕತೆ ನಡೆಯುತ್ತಿದೆ. ಬೇರೆ ಭಾಷೆಗಳಲ್ಲೂ ಕೇಳುತ್ತಿದ್ದಾರೆ’ ಎಂದು ಹೇಳಿಕೊಳ್ಳುತ್ತಾರೆ ಶಶಾಂಕ್ ಸೋಗಾಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net