ಇಷ್ಟೊಂದು ಎಕ್ಸ್​ಪೋಸ್​ ಬೇಡ! ಕಂಗುವ ಹಾಡಿನಲ್ಲಿ ದಿಶಾ ಪಟಾನಿ ಹಾಟ್​ನೆಸ್​ ಕಂಡು ಸೆನ್ಸಾರ್‌ ಮಂಡಳಿ ಶಾಕ್ | Kanguva

Kanguva
Published on

Kanguva : ಕಾಲಿವುಡ್​​ ಸ್ಟಾರ್ ಹೀರೋ ಸೂರ್ಯ ನಟಿಸಿರುವ ಬಹುನಿರೀಕ್ಷಿತ 'ಕಂಗುವ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶಿವ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಫ್ಯಾಂಟಸಿ ಆಕ್ಷನ್ ಚಿತ್ರವಾಗಿ ರೂಪುಗೊಂಡಿದೆ. ಯುವಿ ಕ್ರಿಯೇಷನ್ಸ್ ಮತ್ತು ಸ್ಟುಡಿಯೋ ಗ್ರೀನ್ ಬ್ಯಾನರ್ ಅಡಿಯಲ್ಲಿ ಕೆಇ ಜ್ಞಾನವೇಲ್ ರಾಜ ನಿರ್ಮಿಸಿದ್ದಾರೆ.

ಹತ್ತು ಭಾಷೆಗಳಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಬಾಲಿವುಡ್ ಹಾಟ್ ಬ್ಯೂಟಿ ದಿಶಾ ಪಟಾನಿ ನಾಯಕಿ. ಬಾಬಿ ಡಿಯೋಲ್​ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಂಗುವ ಸಿನಿಮಾ ನವೆಂಬರ್ 14ರಂದು ಬಿಡುಗಡೆಯಾಗಲಿದೆ. ತಾಜಾ ಸಂಗತಿ ಏನೆಂದರೆ ಈ ಚಿತ್ರಕ್ಕೆ ಸಂಬಂಧಿಸಿದ ವಿಷಯವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕಂಗುವ ಚಿತ್ರದ ಪ್ರಚಾರದ ಭಾಗವಾಗಿ ಸಿನಿತಂಡವು ದೇವಿಶ್ರೀ ಪ್ರಸಾದ್ ಸಂಯೋಜಿಸಿದ ಹೈ-ಎನರ್ಜಿ ಟ್ರ್ಯಾಕ್ "ಯೋಲೋ - ಯು ಓನ್ಲಿ ಲೈವ್ ಒನ್ಸ್" ಎರಡನೇ ಸಿಂಗಲ್ ಅನ್ನು ಬಿಡುಗಡೆ ಮಾಡಿದೆ. ನಾಯಕಿ ಮತ್ತು ನಾಯಕನ ಮೇಲೆ ಚಿತ್ರಿಸಲಾದ ಈ ಹಾಡು ಇಬ್ಬರ ನಡುವಿನ ಬಾಂಧವ್ಯವನ್ನು ಪ್ರದರ್ಶಿಸುತ್ತದೆ. ಆದಾಗ್ಯೂ, ಸೆಂಟ್ರಲ್​​ ಬೋರ್ಡ್​​ ಆಫ್​ ಫಿಲ್ಮ್​ ಸರ್ಟಿಫಿಕೇಶನ್​ (CBFC) ಹಾಡಿನ ಮೂರು ಸೆಕೆಂಡುಗಳನ್ನು ತೆಗೆದುಹಾಕಲು ಸೂಚಿಸಿದೆ. ನಿರ್ದಿಷ್ಟವಾಗಿ ದಿಶಾ ಪಟಾನಿ ಅವರ ಡೀಪ್ ಕ್ಲೀವೇಜ್ ಎಕ್ಸ್​ಪೋಸರ್ ಅಂದರೆ, ಎದೆಸೀಳು ತೋರಿಸಿರುವ ದೃಶ್ಯಗಳನ್ನು ತೆಗೆದುಹಾಕಲು ಸಲಹೆ ನೀಡಿದೆ.

ಸೆನ್ಸಾರ್‌ ಹೊರತಾಗಿಯೂ ಹಾಡಿನಲ್ಲಿ ದಿಶಾ ಪಟಾನಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಖತ್​ ಟ್ರೀಟ್ ಆಗುವ ನಿರೀಕ್ಷೆಯಿದೆ. ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ವೆಟ್ರಿ ಪಳನಿಸಾಮಿ ಛಾಯಾಗ್ರಹಣ ಮತ್ತು ನಿಶಾದ್ ಯೂಸುಫ್ ಸಂಕಲನ ಮಾಡಿದ್ದಾರೆ. ಬಾಬಿ ಡಿಯೋಲ್ ವಿಲನ್ ಆಗಿದ್ದಾರೆ. ಎರಡು ಭಾಗಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಅಭಿಮಾನಿಗಳು ಕಂಗುವ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. "ಯೋಲೋ" ಸಾಂಗ್ ಈಗಾಗಲೇ ಬಝ್ ಅನ್ನು ಸೃಷ್ಟಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net