ಕವಿತೆ ಬರೆದ ಕಂಗನಾ!

kangana
Published on

ನಟಿಯಾಗಿ ಚಿತ್ರರಂಗಕ್ಕೆ ಬಂದರು ಕಂಗನಾ ರಣಾವತ್. ‘ಕ್ವೀನ್’ ಚಿತ್ರದ ಸಂಭಾಷಣೆಗಳಿಗೆ ಸಹಾಯ ಮಾಡಿದರು. ‘ಸಿಮ್ರಾನ್’ ಚಿತ್ರಕಥೆಯಲ್ಲಿ ತೊಡಗಿಸಿಕೊಂಡರು. ‘ಮಣಿಕರ್ಣಿಕಾ’ ಚಿತ್ರದ ಮೂಲಕ ನಿರ್ದೇಶಕಿಯೂ ಆದರು. ಈಗ ಕಂಗನಾ, ಲಾಕ್​ಡೌನ್ ಸಮಯದಲ್ಲಿ ಕವಿಯತ್ರಿಯೂ ಆಗಿದ್ದಾರೆ. ಹೌದು, ಲಾಕ್​ಡೌನ್​ನಿಂದ ತಮ್ಮ ತವರೂರು ಮನಾಲಿ ಸೇರಿಕೊಂಡಿರುವ ಕಂಗನಾ, ಅಲ್ಲಿ ಕುಟುಂಬದ ಜತೆಗೆ ಕಾಲ ಕಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಅಮ್ಮಂದಿರ ದಿನದ ಅಂಗವಾಗಿ ಕಂಗನಾ, ತಾಯಿಯ ಮಹತ್ವವನ್ನು ಸಾರುವ ಪದ್ಯ ಬರೆದಿದ್ದರು. ಈಗ ಆಕಾಶದ ಮೇಲೊಂದು ಕವಿತೆ ಬರೆದಿದ್ದಾರೆ.

‘ಆಸ್ಮಾನ್’ ಎನ್ನುವ ಪದ್ಯ ಬರೆದಿರುವ ಕಂಗನಾ, ಅದರಲ್ಲಿ ಭಾವನೆಗಳನ್ನು ಆಕಾಶಕ್ಕೆ ಹೋಲಿಸಿ ಬರೆದಿದ್ದಾರೆ. ಅಷ್ಟೇ ಅಲ್ಲ, ಮನೆಯಲ್ಲೇ ಒಂದು ವಿಡಿಯೋ ಮಾಡಿ, ಹಿನ್ನೆಲೆಯಲ್ಲಿ ಕಾವ್ಯವಾಚನ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಕಂಗನಾ ಅವರಲ್ಲಿ ಅಡಗಿದ್ದ ಈ ಹೊಸ ಪ್ರತಿಭೆಯ ಬಗ್ಗೆ ಅಭಿಮಾನಿಗಳು ಸಾಕಷ್ಟು ಮೆಚ್ಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net