ಅಂಫಾನ್ ಚಂಡಮಾರುತದ ಪರಿಣಾಮವಾಗಿ ಕೋಲ್ಕತ ಸೇರಿದಂತೆ ಪಶ್ಚಿಮ ಬಂಗಾಳದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕರೋನಾ ಸೋಂಕಿತರನ್ನು ಇಡಲಾಗಿರುವ ಕೋಲ್ಕತಾದ ಕ್ವಾರಂಟೈನ್ ಸೆಂಟರ್ ಒಂದಕ್ಕೆ ತೀವ್ರ ಗಾಳಿಯೊಂದಿಗೆ ಮಳೆಯ ನೀರು ನುಗ್ಗಿ ಹಾವಳಿ ಎಬ್ಬಿಸಿದೆ.