

ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಕುಟುಂಬದೊಂದಿಗೆ ಕಾಂತಾರ ಸಿನಿಮಾ ನೋಡಿದ್ದಾರೆ. ಕಾಂತಾರ ಸಿನಿಮಾದ ಹಿಂದಿ ಅವತರಣಿಕೆ ನೋಡಿದ ಕಂಗನಾ, ಸೆಲ್ಫಿ ವಿಡಿಯೋ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿದ್ದಾರೆ. ಮುಂದಿನ ವರ್ಷ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಕಾಂತಾರ ಪ್ರವೇಶಿಸಲಿದೆ ಎಂದಿದ್ದಾರೆ.
ಇಂತಹ ಸಿನಿಮಾವನ್ನು ನಾವು ಈವರೆಗೆ ನೋಡಿಲ್ಲ ಎಂದು ಹೇಳುವುದನ್ನು ನಾನು ಕೇಳಿದೆ. ಹೀಗಾಗಿ ಸಿನಿಮಾ ನೋಡುವ ಕುತೂಹಲ ನನಗೆ ಇನ್ನಷ್ಟು ಹೆಚ್ಚಾಯಿತು. ಇಂತಹ ಸಿನಿಮಾ ಮಾಡಿದ್ದಕ್ಕೆ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಕಾಂತಾರ ಸಿನಿಮಾದ ಗುಂಗಿನಿಂದ ಇನ್ನು ಒಂದು ವಾರ ನನಗೆ ಹೊರಬರಲು ಸಾಧ್ಯವಿಲ್ಲ ಎಂದು ಕಂಗನಾ ಹೇಳಿಕೊಂಡಿದ್ದಾರೆ.