ಪಿಒಕೆ ಆಯ್ತಾ ಮುಂಬೈ?: ಶಿವಸೇನೆ ಸಂಸದರ ಹೇಳಿಕೆಗೆ ಕಂಗನಾ ಪ್ರತಿಕ್ರಿಯೆ..

Kangana
Published on

ಒಂದಿಲ್ಲೊಂದು ಕಾರಣಕ್ಕೆ ಬಾಲಿವುಡ್​ನಲ್ಲಿ ಸದ್ದು ಜತೆಗೆ ಸುದ್ದಿ ಮಾಡುತ್ತಿರುವ ನಟಿ ಕಂಗನಾ ರಣಾವತ್, ಶಿವಸೇನೆ ಸಂಸದರ ಮಾತಿಗೆ ಗುರುವಾರ ಶಾಕಿಂಗ್ ಹೇಳಿಕೆ ನೀಡಿ ಹೊಸ ಬಾಂಬ್ ಸಿಡಿಸಿದ್ದಾರೆ. ‘ಶಿವಸೇನೆ ಮುಖಂಡ ಸಂಜಯ್ ರಾವತ್ ನನಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ನೀವು ಮುಂಬೈಗೆ ಯಾವುದೇ ಕಾರಣಕ್ಕೂ ಬರಲೇಬೇಡಿ ಎಂದಿದ್ದಾರೆ. ಹಾಗಾದರೆ ಮುಂಬೈ ಪಿಒಕೆ ಆಗುತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

ಸುಶಾಂತ್ ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸ್ ಬಗ್ಗೆ ಕಂಗನಾ ಹೇಳಿಕೆ ಖಂಡಿಸಿ, ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಸದ ಸಂಜಯ್ ರಾವತ್ ಲೇಖನ ಬರೆದಿದ್ದರು. ‘ಇದು ಪೊಲೀಸರಿಗೆ ಅವಮಾನವಲ್ಲದೆ ಮತ್ತೇನೂ ಅಲ್ಲ. ಮುಂಬೈನಲ್ಲಿದ್ದುಕೊಂಡೇ ಮುಂಬೈ ಪೊಲೀಸರನ್ನೇ ಅವಮಾನ ಮಾಡುತ್ತಾರೆ ಎಂದರೆ ಏನು ಹೇಳುವುದು. ಮುಂಬೈ ಪೊಲೀಸರ ಬಗ್ಗೆ ಅಷ್ಟೊಂದು ಭಯವಿದ್ದರೆ ಮುಂಬೈಗೆ ಬರಲೇ ಬೇಡಿ ಎಂದು ಸಂಜಯ್ ರಾವತ್ ಹೇಳಿದ್ದರು. ಸಂಸದರ ಈ ಮಾತನ್ನೇ ಕಂಗನಾ ಇದೀಗ ಪಿಒಕೆಗೆ ಹೋಲಿಕೆ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net