"ನಿಮ್ಮ ಸೌಂದರ್ಯ ಬಳಸಿ ಸಿನಿಮಾ ಪ್ರಮೋಟ್ ಮಾಡಿ": ನ್ಯಾಷನಲ್ ಕ್ರಶ್ ಗಿರಿಜಾ ಓಕ್ ಕಾಲೆಳೆದ ಕಂಗನಾ ರಣಾವತ್! Kangana Ranaut

Kangana Ranaut (ಚಿತ್ರ X)
Kangana Ranaut (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಕಂಗನಾ ರಣಾವತ್ ಸದಾ ತಮ್ಮ ನೇರ ಮಾತುಗಳು ಮತ್ತು ವಿಭಿನ್ನ ಸಿನಿಮಾಗಳ ಮೂಲಕ ಸುದ್ದಿಯಲ್ಲಿರುತ್ತಾರೆ
  • ಅವರ ಬಹುನಿರೀಕ್ಷಿತ ಸಿನಿಮಾ 'ಭಾರತ್ ಭಾಗ್ಯ ವಿಧಾತ' ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ
  • ಕಳೆದ ವರ್ಷ, ಪಾಡ್‌ಕ್ಯಾಸ್ಟ್‌ನಿಂದ ನಟಿಯ ಕೆಲವೊಂದು ತುಣುಕುಗಳು ವ್ಯಾಪಕವಾಗಿ ಹರಡಿದ್ದವು
  • ನೀಲಿ ಸೀರೆಯ ಬಗ್ಗೆ ಇದೇನಿದು? ನಾನು ಕೂಡ ಅದರ ಬಗ್ಗೆ ಕೇಳಿದೆ" ಎಂದು ಕಾಲೆಳೆದ ಕಂಗನಾ
Kangana Ranaut: ನಟಿ ಕಂಗನಾ ರಣಾವತ್ ಸದಾ ತಮ್ಮ ನೇರ ಮಾತುಗಳು ಮತ್ತು ವಿಭಿನ್ನ ಸಿನಿಮಾಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರ ಬಹುನಿರೀಕ್ಷಿತ ಸಿನಿಮಾ 'ಭಾರತ್ ಭಾಗ್ಯ ವಿಧಾತ' ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ನಡುವೆ, ಚಿತ್ರದ ಸೆಟ್‌ನಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆ ಮತ್ತು ಅದಕ್ಕೆ ಕಂಗನಾ ನೀಡಿದ ಪ್ರತಿಕ್ರಿಯೆ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಮುಂಬರುವ ಚಿತ್ರದ ಪ್ರಚಾರ ಸಂದರ್ಶನವೊಂದರ ಸಂಭಾಷಣೆಯಲ್ಲಿ ಗಿರಿಜಾ ಓಕ್​ ಅವರ ಸಾಮಾಜಿಕ ಮಾಧ್ಯಮದ ಅನಿರೀಕ್ಷಿತ ಜನಪ್ರೀಯತೆಯ ಕಡೆಗೆ ತಿರುಗಿತು. ಕಳೆದ ವರ್ಷ, ಪಾಡ್‌ಕ್ಯಾಸ್ಟ್‌ನಿಂದ ನಟಿಯ ಕೆಲವೊಂದು ತುಣುಕುಗಳು ವ್ಯಾಪಕವಾಗಿ ಹರಡಿದ್ದವು. ಆ ವಿಡಿಯೋದಲ್ಲಿ ಅವರು ನೀಲಿ ಬಣ್ಣದ ಸೀರೆಯನ್ನು ಧರಿಸಿದ್ದರು. ಅನೇಕರು ಅವರ ಸುಂದರವಾದ ನೋಟವನ್ನು ನೋಡಿ ನ್ಯಾಷನಲ್​ ಕ್ರಶ್​ ಎಂದು ಬಣ್ಣಿಸಿದ್ದರು.
ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ, ಕಂಗನಾ ಮುಗುಳ್ನಗುತ್ತಾ, "ನೀಲಿ ಸೀರೆಯ ಬಗ್ಗೆ ಇದೇನಿದು? ನಾನು ಕೂಡ ಅದರ ಬಗ್ಗೆ ಕೇಳಿದೆ" ಎಂದು ಗಿರಿಜಾ ಓಕ್ ಅವರ ಕಾಲೆಳೆಯುತ್ತಾ ಹೇಳಿರುವುದನ್ನು ಕೇಳಬಹುದು.
ಇದಕ್ಕೆ ಪ್ರತಿಕ್ರಿಯಿಸಿದ ನಟಿ, ನನಗೆ ದೊರೆತ ಕ್ರೆಡಿಟ್​ಗಳನ್ನು ತೆಗೆದುಕೊಳ್ಳಲು ಏಕೆ ಮುಜುಗರವಾಗುತ್ತದೆ ಎಂಬುದನ್ನು ವಿವರಿಸಿದರು. ಆದಾಗ್ಯೂ, ಪಾಡ್​ಕಾಸ್ಟ್​ನಿಂದ ಒಂದು ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅನೇಕರು ಅದಕ್ಕೆ ಕಾಮೆಂಟ್​ ಮಾಡಲು ಪ್ರಾರಂಭಿಸಿದರು. ನಿಜ ಹೇಳಬೇಕೆಂದರೆ ಅದಕ್ಕೆ ಯಾವುದೇ ನಿರ್ದಿಷ್ಟ ತರ್ಕ ಅಥವಾ ಕಾರಣವಿರಲಿಲ್ಲ.
ಬಹಳಷ್ಟು ಜನರು ನನ್ನ ಸೌಂದರ್ಯದ ಬಗ್ಗೆ ಕಾಮೆಂಟ್​ ಮಾಡುತ್ತಲೇ ಇದ್ದಾರೆ. ಆದರೆ, ಅದು ನನ್ನ ವೈಯಕ್ತಿಕ ಸಾಧನೆಗಳಿಂದ ಸಿಕ್ಕಿದ್ದಲ್ಲ. ಬದಲಾಗಿ ನನ್ನ ಜೀನ್​ಗಳು. ಆದರೆ, ಅದನ್ನು ನಾನು ಎಂದಿಗೂ ಕಷ್ಟಪಟ್ಟು ಸಂಪಾದಿಸಿಲ್ಲ ಅನುವಂಶೀಯತೆಯಿಂದ ಬಂದದ್ದು ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ ನೀವು ಸಿನಿಮಾದಲ್ಲಿರುವುದು ನಿಜಕ್ಕೂ ನನಗೆ ಸಂತೋಷ. ದಯವಿಟ್ಟು ಈ ಸೌಂದರ್ಯವನ್ನು ಬಳಸಿ ಚಿತ್ರ ಪ್ರಚಾರ ಮಾಡಿ ಎಂದು ನಗುತ್ತಾ ಹೇಳಿದ್ದು, ಸದ್ಯ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಭಾರತ್ ಭಾಗ್ಯ ವಿಧಾತ ಚಿತ್ರವನ್ನು ಮನೋಜ್ ತಪಾಡಿಯಾ ನಿರ್ದೇಶಿಸಿದ್ದು, ಜೂನ್​ 12 ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಕಂಗನಾ ರನೌತ್, ಗಿರಿಜಾ ಓಕ್, ಸ್ಮಿತಾ ತಾಂಬೆ, ಇಶಾ ಡೇ, ಪ್ರಿಯಾ ಬರ್ಡೆ ಮತ್ತು ಆಶಾ ಶೆಲಾರ್ ನಟಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net