ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಪುಣ್ಯತಿಥಿ; ತಲೈವಿ ಲುಕ್​ನಲ್ಲಿ ಕಂಗನಾ

EocnF7YVgAAILBb
Published on

ಮುಂಬೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ ಅವರು ಇಲ್ಲವಾಗಿ ನಾಲ್ಕು ವರ್ಷಗಳು ಗತಿಸಿದವು. ಅವರ ರಾಜಕೀಯ ಜೀವನವನ್ನೇ ಬಾಲಿವುಡ್​ ನಟಿ ಕಂಗನಾ ತಲೈವಿ ಶೀರ್ಷಿಕೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಇದೀಗ ಜಯಲಲಿತಾ ಪುಣ್ಯತಿಥಿ ನಿಮಿತ್ತ ಚಿತ್ರದ ಒಂದಷ್ಟು ಫೋಟೋಗಳನ್ನು ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಜಯಲಲಿತಾ ಅಮ್ಮ ಅವರ ಪುಣ್ಯತಿಥಿ ನಿಮಿತ್ತ ನಮ್ಮ ತಲೈವಿ ತಂಡದಿಂದ ಒಂದಷ್ಟು ವರ್ಕಿಂಗ್​ ಫೋಟೋಗಳು ಇಲ್ಲಿವೆ. ಇನ್ನು ನನ್ನ ಇಡೀ ತಂಡಕ್ಕೆ ತುಂಬು ಧನ್ಯವಾದಗಳು, ವಿಶೇಷವಾಗಿ ನಮ್ಮ ತಂಡದ ವಿಜಯ್ ಅವರು ಈ ಚಿತ್ರದ ಸಲುವಾಗಿ ಸೂಪರ್ ಹ್ಯೂಮನ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ವಾರದ ಶೂಟಿಂಗ್​ ಮುಗಿದರೆ ಚಿತ್ರ ಮುಕ್ತಾಯವಾಗಲಿದೆ’ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಅರವಿಂದ್ ಸಾಮಿ, ಪ್ರಕಾಶ್ ರೈ, ಜಿಶ್ಶು ಸೇನ್​ಗುಪ್ತಾ, ಸೇರಿ ಸಾಕಷ್ಟು ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಹಿಂದಿ ತೆಲುಗು ಮತ್ತು ತಮಿಳಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ವಿಷ್ಣು ವರ್ಧನ್ ಇಂದೂರಿ, ಶೈಲೇಶ್​ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎ.ಎಲ್ ವಿಜಯ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಕೆ. ವಿ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net