ಕಂಗನಾಗೆ ಅನಾರೋಗ್ಯ ; ಒಂದು ವರ್ಷದಲ್ಲಿ ನಾಲ್ಕು ಬಾರಿ ಅನಾರೋಗ್ಯಕ್ಕೀಡಾದ ನಟಿ

Kangana-Ranaut-9
Published on

ಬಾಲಿವುಡ್ ನಟಿ ಕಂಗನಾ ರಣಾವತ್ ಕಳೆದ ಒಂದು ವರ್ಷದಿಂದ ನಾಲ್ಕು ಚಿತ್ರಗಳಲ್ಲಿ ಬಿಜಿಯಿದ್ದಾರೆ. ಜತೆಗೆ ಅದೇ ಸಮಯದಲ್ಲಿ ನಾಲ್ಕು ಬಾರಿ ಅನಾರೋಗ್ಯದಿಂದಲೂ ಕಂಗೆಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಂಗನಾ, ‘ನಾನು ಕಳೆದ 12 ತಿಂಗಳಲ್ಲಿ ಡೆಂಘೀ, ಕೋವಿಡ್ - ಡೆಲ್ಟಾ, ಕೋವಿಡ್ - ಒಮಿಕ್ರಾನ್, ಮತ್ತು ಹಂದಿ ಜ್ವರಕ್ಕೆ ತುತ್ತಾಗಿದ್ದೆ. ಹೀಗೆ ಕಳೆದ ಒಂದು ವರ್ಷದಿಂದ ಸತತವಾಗಿ ಅನಾರೋಗ್ಯಕ್ಕೀಡಾಗಿದ್ದೆ. ಹೀಗೆ ಯಾಕೆ ಹೇಳುತ್ತಿದ್ದೇನೆಂದರೆ ಪ್ರತಿಯೊಬ್ಬರೂ ಕೆಲವೊಮ್ಮೆ ಕುಗ್ಗುತ್ತಾರೆ, ಹತಾಶರಾಗುತ್ತಾರೆ. ಬ್ಯಾಟ್‌ಮ್ಯಾನ್‌ನಂತಹ ಸೂಪರ್‌ಹೀರೋಗಳು ಸಹ. ಆದರೂ ನಡೆಯುತ್ತಿರಬೇಕು, ಮುಂದಕ್ಕೆ ಸಾಗುತ್ತಿರಬೇಕು’ ಎಂದು ಬರೆದುಕೊಂಡಿದ್ದಾರೆ.

ಈ ವರ್ಷ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ‘ಟೀಕು ವೆಡ್ಸ್ ಶೇರು’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ ಸದ್ಯ ಮೂರು ಚಿತ್ರಗಳಲ್ಲಿ ಬಿಜಿಯಿದ್ದಾರೆ. ಪಿ. ವಾಸು ನಿರ್ದೇಶನದ, ರಾಘವ ಲಾರೆನ್ಸ್ ನಾಯಕನಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಚಂದ್ರಮುಖಿ 2’ ಇದೇ ತಿಂಗಳ 28ರಂದು ರಿಲೀಸ್ ಆಗಲಿದೆ. ಜತೆಗೆ ‘ತೇಜಸ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಹಾಗೇ ನೈಜ ಘಟನೆಯಾಧಾರಿತ ‘ಎಮರ್ಜೆನ್ಸಿ’ ಚಿತ್ರವನ್ನು ಖುದ್ದು ಕಂಗನಾ ನಿರ್ದೇಶಿಸುತ್ತಿದ್ದು, ಚಿತ್ರೀಕರಣದ ಹಂತದಲ್ಲಿದೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net