More

  ಖಿನ್ನತೆಯಿಂದ ಸಾವಿಗೆ ಶರಣಾದ ಮಗಳು: ನಟ ವಿಜಯ್​ ಆಂಟೋನಿಯ ಹಳೇ ವಿಡಿಯೋ ವೈರಲ್​

  ಚೆನ್ನೈ: ತಮಿಳು ನಟ ವಿಜಯ್​ ಆಂಟೋನಿ ಅವರ ಮಗಳು ಮೀರಾ 16ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ವಿಜಯ್​ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಕಾಲಿವುಡ್​ ಚಿತ್ರರಂಗವನ್ನು ಆಘಾತಕ್ಕೆ ದೂಡಿದೆ.

  ಮೀರಾ 12ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಚೆನ್ನೈನ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಸಾವಿನ ಹಾದಿ ಹಿಡಿಯಲು ಖಿನ್ನತೆಯೇ ಮುಖ್ಯ ಕಾರಣ ಎಂದು ಹೇಳಲಾಗಿದೆ. ಇದರ ನಡುವೆ ವಿಜಯ್​ ಆಂಟೋನಿ ಅವರ ಹಳೆಯ ಸಂದರ್ಶನದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

  ವೈರಲ್​ ವಿಡಿಯೋದಲ್ಲಿ ವಿಜಯ್​ ಆಂಟೋನಿ, ಪಾಲಕರು ಜವಾಬ್ದಾರಿಯ ಬಗ್ಗೆ ತಮ್ಮ ನಿಲುವನ್ನು ಚರ್ಚಿಸಿದ್ದರು ಮತ್ತು ತಮ್ಮ ಸ್ವಂತ ಆಯ್ಕೆಗಳನ್ನು ಮಾಡಲು ತಮ್ಮ ಮಗಳನ್ನು ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ಹೇಳಿಕೊಂಡಿದ್ದರು. ತಮ್ಮ ಮಗಳನ್ನು ಓದಲು ಎಂದಿಗೂ ಒತ್ತಾಯಿಸಿಲ್ಲ ಮತ್ತು ಆಕೆಯ ಓದಿನ ವಿಷಯವು ಮನೆಯಲ್ಲಿ ವಿವಾದದ ವಿಷಯವೇ ಅಲ್ಲ ಎಂದು ಒತ್ತಿ ಹೇಳಿದ್ದರು. ಯಾವಾಗಲೂ ತಮ್ಮ ಮಗಳನ್ನು ತಾವೇ ಪ್ರೋತ್ಸಾಹಿಸುತ್ತಿದ್ದರು ಮತ್ತು ಅವಳ ಮೇಲೆ ಯಾವುದೇ ನಿರೀಕ್ಷೆಗಳನ್ನು ಹೇರಿರಲಿಲ್ಲ ಎಂದು ತಿಳಿಸಿದ್ದರು.

  ಇದನ್ನೂ ಓದಿ: ವಾರಾಣಸಿಯಲ್ಲಿ ಸಿದ್ಧವಾಗಲಿದೆ ಕ್ರಿಕೆಟ್​ ಕಾಶಿ! ತ್ರಿಶೂಲದಂತೆ ಫ್ಲಡ್​ಲೈಟ್​, ಢಮರುಗದಂತೆ ಪ್ರವೇಶ ದ್ವಾರ!

  ಇದರ ನಡುವೆ ವಿಜಯ್ ಆಂಟನಿ ಅವರ ಇನ್ನೊಂದು ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಆತ್ಮಹತ್ಯೆಗೆ ಸಂಬಂಧಿಸಿದ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಕೇವಲ ಏಳು ವರ್ಷದವರಾಗಿದ್ದಾಗ ತಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡರು ಎಂದು ಬಹಿರಂಗಪಡಿಸಿದರು. ಇದು ಅವರ ಜೀವನದ ಮೇಲೆ ಆಳವಾದ ಪ್ರಭಾವ ಬೀರಿತು ಮತ್ತು ಇಂತಹ ದುರಂತಗಳನ್ನು ಅನುಭವಿಸಿದ ಕುಟುಂಬಗಳಿಗೆ ವಿಜಯ್​ ಅವರು ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದರು.

  ಆತ್ಮಹತ್ಯೆಗೆ ಸಂಬಂಧಿಸಿದ ನೋವು ಮತ್ತು ಕಷ್ಟವನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಎಂದು ಒತ್ತಿ ಹೇಳಿದರು. ತಾನು ಎದುರಿಸಿದ ಕಷ್ಟಗಳ ಹೊರತಾಗಿಯೂ ಎಂದಿಗೂ ಆತ್ಮಹತ್ಯೆಯ ಬಗ್ಗೆ ಯೋಚಿಸಲಿಲ್ಲ ಎಂದು ಹೇಳಿದ್ದರು. (ಏಜೆನ್ಸೀಸ್​)

  ಏಷ್ಯಾಕಪ್ ಫೈನಲ್​ ಪ್ರಚಂಡ ದಾಳಿಯಿಂದ ಸಿರಾಜ್​ಗೆ ಒಲಿಯಿತು ವಿಶ್ವ ನಂ. 1 ಪಟ್ಟ!

  ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಬೆಸ್ಟ್!: 5, 8ನೇ ತರಗತಿ ಮೌಲ್ಯಾಂಕನ ವಿಶ್ಲೇಷಣೆ ಬಿಡುಗಡೆ; ಗ್ರಾಮೀಣರ ಮೇಲುಗೈ

  ರಾಜ್ಯೋತ್ಸವ ರಸಪ್ರಶ್ನೆ - 26

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts