ಪಿಎಂ ಕೇರ್ಸ್‌ಗೆ ಅಮ್ಮ-ಮಗಳ ದೇಣಿಗೆ ... ಕಂಗನಾ ಮತ್ತು ಅವರ ತಾಯಿ ಕೊಟ್ಟಿದ್ದೆಷ್ಟು ಗೊತ್ತಾ?

Kangana Ranaut Final
Published on

ಕರೊನಾದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಇಂಥ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ಥಾಪಿಸಿರುವ ‘ಪಿಎಂ ಕೇರ್ಸ್‌’ ಎಂಬ ಪರಿಹಾರ ನಿಧಿಗೆ ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಲೇ ಇದ್ದಾರೆ. ಇದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಸಹ ಹಿಂದೆ ಬಿದ್ದಿಲ್ಲ. ಈಗಾಗಲೇ ಅಕ್ಷಯ್ ಕುಮಾರ್, ಸೈಫ್​ ಅಲಿ ಖಾನ್, ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಧನ ಸಹಾಯ ಮಾಡಿದ್ದಾಗಿದೆ. ಆ ಸಾಲಿಗೆ ಕಂಗನಾ ರಣಾವತ್ ಸಹ ಸೇರಿದ್ದಾರೆ.

ಬಾಲಿವುಡ್‌ನ ಅತ್ಯಂತ ವಿವಾದಾತ್ಮಕ ನಟಿ ಎಂದೇ ಜನಪ್ರಿಯರಾಗಿರುವ ಕಂಗನಾ ರಣೌವತ್ ಅವರು ‘ಪಿಎಂ ಕೇರ್ಸ್‌’ಗೆ 25 ಲಕ್ಷ ದೇಣಿಗೆ ನೀಡಿದ್ದಾರೆ. ಬೇರೆ ನಟಿಯರು ದೇಣಿಗೆ ನೀಡಿದ್ದಾರಾದರೂ, ಯಾರು ಎಷ್ಟು ಸಹಾಯ ಮಾಡಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈಗ ಕಂಗನಾ 25 ಲಕ್ಷ ಕೊಟ್ಟಿದ್ದಾರೆ ಎಂದು ಅವರ ಸಹೋದರಿ ರಂಗೋಲಿ ಚಾಂಡೆಲ್ ಹೇಳಿಕೊಂಡಿದ್ದಾರೆ. ಅದರ ಜತೆಗೆ, ದಿನಗೂಲಿ ನೌಕರರಿಗೆ ಕಂಗನಾ ದಿನಸಿ ವಿತರಿಸಿದ್ದಾರೆ ಎಂದು ರಂಗೋಲಿ ಟ್ವೀಟ್ ಮಾಡಿದ್ದಾರೆ.

ಬರೀ ಕಂಗನಾ ಅಷ್ಟೇ ಅಲ್ಲ, ಅವರ ತಾಯಿ ಆಶಾ ರಣೌತ್ ಸಹ ಧನ ಸಹಾಯ ಮಾಡಿದ್ದಾರಂತೆ. ಆಶಾ ಅವರು ತಮ್ಮ ಒಂದು ತಿಂಗಳ ಪೆನ್ಶನ್ ಕೊಟ್ಟಿದ್ದಾರೆ ಎಂದು ರಂಗೋಲಿ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net