ರಣವೀರ್, ರಣಬೀರ್​ಗೂ ಅಂಟಿತು ಡ್ರಗ್ ನಂಟು!

Kangana
Published on

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ಮಾಫಿಯಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಬಾಲಿವುಡ್​ನಲ್ಲಿಯೂ ಡ್ರಗ್ ವಿಚಾರ ಚಾಲ್ತಿಯಲ್ಲಿದೆ. ಇದೀಗ ಆ ಬಗ್ಗೆ ಕಂಗನಾ ರಣಾವತ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿ, ಬಾಲಿವುಡ್​ನ ಸ್ಟಾರ್ ನಟರಾದ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ವಿರುದ್ಧವೂ ಡ್ರಗ್ ಸೇವನೆ ಆರೋಪ ಹೊರಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಟ್ವಿಟ್ ಮಾಡಿಕೊಂಡಿರುವ ಅವರು ಕಂಗನಾ, ‘ರಣವೀರ್ ಸಿಂಗ್, ರಣಬೀರ್ ಕಪೂರ್, ವಿಕ್ಕಿ ಕೌಶಾಲ್, ಆಯನ್ ಮುಖರ್ಜಿ ಅವರಲ್ಲಿ ಮನವಿಯೊಂದನ್ನು ಮಾಡುತ್ತೇನೆ. ರಕ್ತದ ಮಾದರಿ ನೀಡಿ ಡ್ರಗ್ಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ನೀವೆಲ್ಲರೂ ಮಾದಕ ವ್ಯಸನಿಗಳೆಂದು ಹಲವು ವದಂತಿಗಳು ಹರಿದಾಡುತ್ತಿವೆ. ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ಪ್ರತಿಕ್ರಿಯಿಸಬೇಕು. ನಿಮ್ಮ ಈ ನಿರ್ಧಾರ ಕೋಟ್ಯಂತರ ಯುವಕರಿಗೆ ಸ್ಪೂರ್ತಿಯಾಗಲಿದೆ’ ಎಂದಿದ್ದಾರೆ.

ಅಷ್ಟೇ ಅಲ್ಲ ಈ ವಿಚಾರವನ್ನೂ ಪ್ರಧಾನಿ ಕಚೇರಿಯ ಅಧಿಕೃತ ಟ್ವಿಟರ್​ಗೂ ಟ್ಯಾಗ್ ಮಾಡಿದ್ದಾರೆ. ಸುಶಾಂತ್ ಆತ್ಮಹತ್ಯೆ ಪ್ರಕರಣದ ಬಳಿಕ ಬಾಲಿವುಡ್​ನಲ್ಲಿ ನಡೆಯುತ್ತಿರುವ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಹೇಳಿಕೆ ನೀಡುತ್ತಿರುವ ನಟಿ ಕಂಗನಾ, ನೆಪೋಟಿಸಂ ವಿಚಾರವಾಗಿ ಇಡೀ ಇಂಡಸ್ಟ್ರಿಯನ್ನೇ ನಡುಗಿಸಿದ್ದರು. ಇದೀಗ ಡ್ರಗ್ ಮಾಫಿಯಾ ವಿರುದ್ಧ ಕಣಕ್ಕಿಳಿದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net