ನಿರ್ಮಾಪಕರ ಹತ್ತಿರ ಭಿಕ್ಷೆ ಬೇಡುವವಳ ಧಿಮಾಕು ನೋಡಿ ... ತಾಪ್ಸಿಗೆ ಕಂಗನಾ ತರಾಟೆ

Tapsee - Kangana - Final
Published on

ಮುಂಬೈ: ಬಹುಶಃ ಕಂಗನಾ ಬಗ್ಗೆ ತಾಪ್ಸಿ ಆ ರೀತಿ ಮಾಡದಿದ್ದರೆ ಮತ್ತೊಮ್ಮೆ ರಾಡಿ ಆಗುತ್ತಿರಲಿಲ್ಲವೇನೋ? ಆದರೆ, ಕಂಗನಾ ಅವರನ್ನು ಹೀಯಾಳಿಸಿ ತಾಪ್ಸಿ ಮಾತನಾಡಿದ್ದಾರೆ. ಈಗ ತಾಪ್ಸಿಗೆ ಕಂಗನಾ ಬಾಯಿಗೆ ಬಂದ ಹಾಗೆ ಬಯ್ಯುತ್ತಿದ್ದಾರೆ.

ಇಷ್ಟಕ್ಕೂ ಆಗಿದ್ದೇನೆಂದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ, ತಾಪ್ಸಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಟ್ವಿಟರ್​ನಿಂದ ಕಂಗನಾ ಹೊರಹೋಗಿದ್ದರ ಬಗ್ಗೆ ಏನನಿಸುತ್ತಿದೆ? ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೀರಾ ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ್ದ ತಾಪ್ಸಿ, 'ನಾನು ಆಕೆಯನ್ನು ಯಾವತ್ತೂ ಮಿಸ್​ ಮಾಡಿಕೊಂಡಿರಲಿಲ್ಲ, ಮಾಡಿಕೊಳ್ಳುವುದೂ ಇಲ್ಲ. ಆಕೆ ನನ್ನ ಪಾಲಿಗೆ ಅಪ್ರಸ್ತುತ. ಆಕೆ ಒಬ್ಬ ನಟಿ ಎನ್ನುವುದು ಬಿಟ್ಟರೆ, ನನ್ನ ಜೀವನದಲ್ಲಿ ಆಕೆಗೆ ಯಾವುದೇ ಸ್ಥಾನವಿಲ್ಲ. ಆಕೆಯ ಬಗ್ಗೆ ನನಗೆ ಯಾವುದೇ ಭಾವನೆಗಳಿಲ್ಲ. ಒಳ್ಳೆಯದೂ ಇಲ್ಲ, ಕೆಟ್ಟದ್ದೂ ಇಲ್ಲ. ಒಳ್ಳೆಯದಾಗಲೀ, ಕೆಟ್ಟದ್ದಾಗಲೀ ಭಾವನೆಗಳು ಹೃದಯದಿಂದ ಬರಬೇಕು. ಆದರೆ, ನನ್ನ ಹೃದಯದಲ್ಲಿ ಆಕೆಗೆ ಯಾವುದೇ ಸ್ಥಾನವಿಲ್ಲ. ಆಕೆಗೆ ಯಾವತ್ತೂ ಕೇರ್​ ಮಾಡಿಲ್ಲ, ಮಾಡುವುದೂ ಇಲ್ಲ' ಎಂದು ಹೇಳಿಕೊಂಡಿದ್ದರು.

ಇದಕ್ಕೆ ಪ್ರತಿಯಾಗಿ ಮಾತನಾಡಿರುವ ಕಂಗನಾ, 'ನಿರ್ಮಾಪಕರಿಗೆ ಕರೆ ಮಾಡಿ, ನಾನು ಮಾಡದೇ ಬಿಟ್ಟಿರುವ ಪಾತ್ರ ಏನಾದರೂ ಇದೆಯಾ ಎಂದು ಕೇಳುವವಳ ಧಿಮಾಕು ನೋಡಿ. ಅವಳಿಗೆ ಬಡವರ ಕಂಗನಾ ಅಂತ ಕರೆಸಿಕೊಳ್ಳುವುದಕ್ಕೆ ಬಹಳ ಇಷ್ಟ. ಅದೇ ಕಾರಣಕ್ಕೆ ಕಡಿಮೆ ಬಜೆಟ್​ನ ಚಿತ್ರಗಳಲ್ಲಿ ನಟಿಸುತ್ತಿರುತ್ತಾಳೆ. ಅಂಥವಳು ಈಗ ನಾನು ಅಪ್ರಸ್ತುತ ಎಂದು ಹೇಳುತ್ತಾಳೆ. ತಾಪ್ಸಿ ಅಭಿನಯದ 'ಹಸೀನ್​ ದಿಲ್​ರುಬಾ' ಚಿತ್ರ ಬಿಡುಗಡೆಗೆ ಬಂದಿದೆ. ಅದೇ ಕಾರಣಕ್ಕೆ ಇಷ್ಟೆಲ್ಲ ಮಾತಾಡುತ್ತಿದ್ದಾಳೆ. ನನ್ನ ಹೆಸರಿಲ್ಲದೆ ಆ ಚಿತ್ರವನ್ನು ಪ್ರಮೋಟ್​ ಮಾಡುವುದಕ್ಕೆ ಪ್ರಯತ್ನ ಮಾಡು, ಒಳ್ಳೇದಾಗ್ಲಿ' ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net