ಮಲೆನಾಡಿನ ಪ್ರೇಮಕಥೆ; ಗೃಹ ಸಚಿವರಿಂದ ‘ಕಂಬ್ಳಿಹುಳ’ ಟ್ರೇಲರ್ ಬಿಡುಗಡೆ

Kamblihula
Published on

ಬೆಂಗಳೂರು: ‘ಕಂಬ್ಳಿಹುಳ’ ಎಂಬ ಹೊಸಬರ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ನ.4ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಮಧ್ಯೆ, ಇತ್ತೀಚೆಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ನವನ್ ಶ್ರೀನಿವಾಸ್ ಸೇರಿದಂತೆ ಈ ಚಿತ್ರತಂಡದ ಬಹುತೇಕರು ಮಲೆನಾಡಿನವರು.

ಈ ಚಿತ್ರದ ಕುರಿತು ಮಾತನಾಡುವ ಅವರು, ‘ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆ ಇದು. ಇದೊಂದು ನೈಜ ಘಟನೆಯಾಧಾರಿತ ಚಿತ್ರ. ನಾನು ಸಹ ಮಲೆನಾಡಿನವನಾದ್ದರಿಂದ ಸುಲಭವಾಗಿ ಹೇಳಬಹುದು ಎಂದು ಆ ಭಾಗದ ಕಥೆಯನ್ನೇ ಆಯ್ಕೆ ಮಾಡಿಕೊಂಡೆ. ಈ ಚಿತ್ರ ಎಲ್ಲರಿಗೂ ಒಳ್ಳೆಯ ಫೀಲ್ ಕೊಡುತ್ತದೆ ಎಂಬ ನಂಬಿಕೆ ಇದೆ’ ಎಂದರು.

‘ಕಂಬ್ಳಿಹುಳ’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಂಜನ್ ನಾಗೇಂದ್ರ ಮತ್ತು ಆಶ್ವಿತಾ ನಟಿಸಿದ್ದಾರೆ. ಇಬ್ಬರೂ ರಂಗಭೂಮಿ ಕಲಾವಿದರಂತೆ. ಈ ಕುರಿತು ಮಾತನಾಡುವ ಆಶ್ವಿತಾ, ‘ನಾನು ಇಲ್ಲಿ ಮಲೆನಾಡಿನಲ್ಲಿ ವಾಸವಾಗಿರುವ ಮಲಯಾಳಿ ಹುಡುಗಿಯ ಪಾತ್ರ ಮಾಡಿದ್ದೇನೆ. ಚಿತ್ರರಂಗ ಹೊಸದು. ಹೊಸಬರ ಸಿನಿಮಾ ನೋಡಿ ಹಾರೈಸಿ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net