ಶಾಲಾ ದಿನಗಳಲ್ಲಿ ಹುಡುಗರನ್ನು ಎಳೆದೆಳೆದು ಕಿಸ್​ ಮಾಡುತ್ತಿದ್ದೆ: ಶಾಕಿಂಗ್​ ಹೇಳಿಕೆ ನೀಡಿದ ಬಾಲಿವುಡ್​ ನಟಿ

Bollywood Actress
Published on

ಮುಂಬೈ: ಬಾಲಿವುಟ್​ ನಟಿ ಹಾಗೂ ನಿರ್ದೇಶಕ ಅನುರಾಗ್​ ಕಶ್ಯಪ್​ ಮಾಜಿ ಪತ್ನಿ ಕಲ್ಕಿ ಕೋಚ್ಲಿನ್ ಅವರು ತಮ್ಮ ಶಾಲಾ ದಿನಗಳಲ್ಲಿನ ತುಂಟತನದ ಬಗ್ಗೆ ದಿ ತಾರಾ ಶರ್ಮ ಶೋನಲ್ಲಿ ಬಹಿರಂಗಪಡಿಸಿದ್ದಾರೆ. ಶಿಕ್ಷಕರ ಮುಂದೆ ಉತ್ತಮ ವಿದ್ಯಾರ್ಥಿನಿಯಾಗಿದ್ದ ಕೋಚ್ಲಿನ್​ ಅವರಿಲ್ಲದ ಸಮಯದಲ್ಲಿ ತುಂಬಾ ತುಂಟಿಯಾಗಿದ್ದರಂತೆ.

ತರಗತಿಯಲ್ಲಿ ನಾನು ತುಂಬಾ ತುಂಟಿಯಾಗಿದ್ದೆ. ಆದರೆ, ನಾನು ಶಿಕ್ಷಕರ ನೆಚ್ಚಿನ ವಿದ್ಯಾರ್ಥಿನಿ. ಶಿಕ್ಷಕರು ಹೊರ ಹೋದಂತಹ ಸಮಯದಲ್ಲಿ ಕೊಳಕು ಜೋಕ್ಸ್​ಗಳನ್ನು ಮಾಡುತ್ತಿದ್ದೆ. ಹುಡುಗರನ್ನು ಹಿಡಿದು ಚುಂಬಿಸುತ್ತಿದ್ದೆ. ನಾನು ನಿಜಕ್ಕೂ ಭಯಂಕರ ಎಂದ ಹೇಳಿಕೊಂಡಿದ್ದಾರೆ.

ಪ್ರೌಢಾವಸ್ಥೆಗೂ ಮುನ್ನ ಹುಡುಗರು ಹೇಗಿರುತ್ತಾರೆ ಎಂಬುದು ನಿಮಗೆ ತಿಳಿದಿದೆ. ಎಲ್ಲಿ ಹುಡುಗಿಯರನ್ನು ದ್ವೇಷಿಸುತ್ತಾರೆಯೋ ಅದನ್ನು ಪತ್ತೆ ಹಚ್ಚಿ ತಮಾಷೆಗಾಗಿ ಹುಡುಗರನ್ನು ಹಿಂಬಾಲಿಸಿ ಹಿಡಿದು ಮುತ್ತಿಡುವ ಪ್ರಯತ್ನ ಮಾಡುತ್ತಿದ್ದೆ. ಅವರು ಕೂಡ ಹಾಗೇ ಮಾಡುತ್ತಿದ್ದರು. ಶಾಲೆ ಮುಗಿಸಿ ಮನೆಗೆ ಬಂದಾಗ ಬೇರೆ ರೀತಿ ಇರುತ್ತಿದೆ. ನನ್ನ ತಾಯಿ ತುಂಬಾ ಶಿಸ್ತು ಉಳ್ಳವರು. ಹೀಗಾಗಿ ನಾನು ಶಾಂತ ಸ್ವಭಾವದಿಂದ ಇರುತ್ತಿದ್ದೆ ಎಂದು ನಟಿ ತಿಳಿಸಿದ್ದಾರೆ.

ಸದ್ಯ ಕಲ್ಕಿ ಹಾಗೂ ಆಕೆಯ ಬಾಯ್​ಫ್ರೆಂಟ್​ ಗಯ್​ ಹರ್ಸ್​ಬರ್ಗ್​ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹರ್ಸ್​ಬರ್ಗ್​ ಇಸ್ರೇಲ್​ನ ಸಂಗೀತಗಾರರಾಗಿದ್ದಾರೆ.

ಅಂದಹಾಗೆ ಕಲ್ಕಿ, ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಅವರ ಮಾಜಿ ಪತ್ನಿ. 2011ರಲ್ಲಿ ಕಶ್ಯಪ್​ರನ್ನು ವರಿಸಿದ್ದ ಕಲ್ಕಿ ನಂತರ ವೈವಾಹಿಕ ಜೀವನದ ಮನಸ್ತಾಪದಿಂದ ಪರಸ್ಪರ ಒಪ್ಪಿಗೆ ಮೇರೆಗೆ 2015ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ನಟಿ ಕಲ್ಕಿ ಮೂಲ ತಮಿಳುನಾಡಿನ ಪುದುಚೆರಿಯವರು. ಭಾರತ ಮತ್ತು ಫ್ರೆಂಚ್​ ನಾಗಕರಿರಾಗಿದ್ದಾರೆ. ಹಲವು ಬಾಲಿವುಡ್​ ಚಿತ್ರಗಳಲ್ಲಿ ಕಲ್ಕಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net