ಕಲ್ಕಿ ₹ 191.5 ಕೋಟಿ ಕಲೆಕ್ಷನ್; ಮತ್ತೊಮ್ಮೆ ದಾಖಲೆ ಬರೆದ ಪ್ರಭಾಸ್ ಅಭಿನಯದ ಚಿತ್ರ

FotoJet (1)
Published on

ಅಶ್ವಿನಿ ನಾಗ್ ನಿರ್ದೇಶನದ ಬಹುತಾರಾಗಣದ ‘ಕಲ್ಕಿ 2898 ಎಡಿ’ ವಿಶ್ವಾದ್ಯಂತ ಬಿಡುಗಡೆಗೊಂಡು ಯಶಸ್ವಿಯಾಗಿ ಮುನ್ನುಗುತ್ತಿದ್ದು, ಹಲವು ದಾಖಲೆ ಬರೆದಿದೆ. ನಟ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಸೇರಿ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆಯಾದ ಮೊದಲ ದಿನವೇ ಈ ಸಿನಿಮಾ ಅಂದಾಜು 191.5 ಕೋಟಿ ರೂ. ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಭಾರತೀಯ ಸಿನಿಮಾ ರಂಗದಲ್ಲಿ ಮೊದಲ ದಿನವೇ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಮೂರನೇ ಸಿನಿಮಾ ಎಂಬ ದಾಖಲೆ ಬರೆದಿದೆ. ಈ ಹಿಂದೆ ‘ಆರ್‌ಆರ್‌ಆರ್’ ಮೊದಲ ದಿನ 223 ಕೋಟಿ ರೂ. ಗಳಿಸಿದ್ದರೆ, ‘ಬಾಹುಬಲಿ : ದ ಕನ್‌ಕ್ಲೂಷನ್’ 200 ಕೋಟಿ ರೂ. ಗಳಿಕೆ ಮಾಡಿಕೊಂಡಿತ್ತು. ಇದೀಗ 191. 5 ಕೋಟಿ ರೂ. ಕಲೆಕ್ಷನ್‌ನೊಂದಿಗೆ ‘ಕಲ್ಕಿ 2898 ಎಡಿ’ ಮೂರನೇ ಸ್ಥಾನ ತನ್ನದಾಗಿಸಿಕೊಂಡಿದೆ. ‘ಕೆಜಿಎ್ ಚಾಪ್ಟರ್ 2’ ನಾಲ್ಕನೇ ಹಾಗೂ ‘ಸಲಾರ್’ ಐದನೇ ಸ್ಥಾನ ಪಡೆದಿವೆ. ತೆಲುಗು ಭಾಷೆಯಿಂದ 64.5 ಕೋಟಿ ರೂ., ಹಿಂದಿಯಲ್ಲಿ 24 ಕೋಟಿ ರೂ., ತಮಿಳಿನಲ್ಲಿ 4 ಕೋಟಿ ರೂ., ಮಲಯಾಳಂನಲ್ಲಿ 2.2 ಕೋಟಿ ರೂ. ಹಾಗೂ ಕನ್ನಡದಲ್ಲಿ 30 ಲಕ್ಷ ರೂ. ಗಳಿಕೆಯಾಗಿದೆ ಎಂದು ವರದಿಯಾಗಿದೆ. ಮೊದಲ ದಿನವೇ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಅಗ್ರ ಐದು ಚಿತ್ರಗಳಲ್ಲಿ ಪ್ರಭಾಸ್ ನಟನೆಯ ಮೂರು ಸಿನಿಮಾಗಳಿರುವುದು ವಿಶೇಷ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net