

ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರವನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಕಾಯುತ್ತಿರುವವರು ನಿರ್ದೇಶಕ ಕೊರಟಾಲ ಶಿವ ಮಾತ್ರ ಅಲ್ಲ, ಈ ಪಟ್ಟಿಗೆ ಚಿತ್ರದ ನಾಯಕಿ ಕಾಹಲ್ ಅಗರವಾಲ್ ಸಹ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೆಗಾ ಸ್ಟಾರ್ ಜತೆಗೆ ನಟಿಸುವುದಕ್ಕೆ ಥ್ರಿಲ್ ಆಗಿದೆ ಎಂದು ಹೇಳಿಕೊಂಡಿದ್ದ ಕಾಜಲ್, ಈಗ ಆದಷ್ಟು ಬೇಗ 'ಆಚಾರ್ಯ' ಚಿತ್ರವನ್ನು ಮುಗಿಸಿ ಎಂದು ಚಿತ್ರತಂಡದವರಿಗೆ ಹೇಳುತ್ತಿದ್ದಾರಂತೆ. ಅಷ್ಟೇ ಅಲ್ಲ, ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಡೇಟ್ಸ್ ಕೊಡುವುದಕ್ಕೂ ಮುಂದಾಗಿದ್ದಾರಂತೆ.
ಇಷ್ಟಕ್ಕೂ 'ಆಚಾರ್ಯ' ಚಿತ್ರದಲ್ಲಿ ತಮ್ಮ ಕೆಲಸ ಮುಗಿಸುವುದಕ್ಕೆ ಕಾಜಲ್ ಅಷ್ಟೊಂದು ಕಾತರರಾಗಿರುವುದು ಏಕೆ? ಈ ಬಗ್ಗೆ ಅವರು ಬಾಯಿಬಿಟ್ಟಿಲ್ಲ. ಅವಸರಕ್ಕೆ ಕಾರಣವೇನು ಎಂದು ಎಲ್ಲೂ ಹೇಳಿಕೊಂಡಿಲ್ಲ. ಮೂಲಗಳ ಪ್ರಕಾರ, ಅದಕ್ಕೆ ಕಾರಣ ಆಕೆಯ ಮದುವೆ,
ಕಾಜಲ್ ಮದುವೆಯಾಗುತ್ತಿದ್ದಾರೆ ಎಂನ ವಿಷಯ ಟಾಲಿವುಡ್ನಲ್ಲಿ ಕೇಳಿ ಬರುತ್ತಿದೆ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಅಷ್ಟೇ ಅಲ್ಲ, ಗೌತಮ್ ಎನ್ನುವವರ ಜತೆಗೆ ಅವರ ನಿಶ್ಚಿತಾರ್ಥ ಇದೀಗ ಸದ್ದಿಲ್ಲದೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಈಗಲೇ ಎಲ್ಲೆಡೆ ಹರಡಿದರೆ, ಎಲ್ಲರೂ ಕೇಳುತ್ತಾರೆ, ಉತ್ತರಿಸುವುದು ಬಹಳ ಕಷ್ಟವಾಗುತ್ತದೆ ಎಂದು ಇದುವರೆಗೂ ಎಂಗೇಜ್ಮೆಂಟ್ನ ಫೋಟೋಗಳನ್ನು ಹೊರಗೆ ಬಿಟ್ಟಿಲ್ಲವಂತೆ.
ಮದುವೆಯಾಗುವುದಕ್ಕಿಂತ ಮುನ್ನ ತನ್ನೆಲ್ಲಾ ಕಮಿಟ್ಮೆಂಟ್ಗಳನ್ನು ಮುಗಿಸಬೇಕು ಎನ್ನುವುದು ಕಾಜಲ್ ಆಸೆ. ಅದೇ ಕಾರಣಕ್ಕೆ, 'ಆಚಾರ್ಯ' ಚಿತ್ರದ ಚಿತ್ರೀಕರಣ ಮುಗಿಸಿ, ಬೇರೆ ಚಿತ್ರಗಳತ್ತ ಹೋಗುವುದಕ್ಕೆ ಅವರು ತುದಿಗಾಲಲ್ಲಿ ನಿಂತಿದ್ದಾರಂತೆ. ಆದರೆ, ಕರೊನಾ ಹಾವಳಿಯಿಂದ ಚಿತ್ರೀಕರಣ ಮುಂದೂಡಿರುವ ಚಿತ್ರತಂಡ, ಕಾಜಲ್ ಮಾತಿಗೆ ಬೆಲೆಕೊಟ್ಟು, ಬೇಗ ಆಕೆಯ ಭಾಗದ ಚಿತ್ರೀಕರಣ ಮುಗಿಸುತ್ತದಾ ಎಂಬ ಕುತೂಹಲ ಎಲ್ಲರಿಗೂ ಇದೆ.