ಕಾಜಲ್ ಅಗರ್ವಾಲ್ ಪ್ರೆಗ್ನೆನ್ಸಿ ವರ್ಕ್​ಔಟ್ ಹೇಗಿದೆ ಗೊತ್ತಾ? ವಿಡಿಯೋ ವೈರಲ್!

Published on
ಮುಂಬೈ: ನಟಿ ಕಾಜಲ್ ಅಗರ್ವಾಲ್ ಫಿಟ್ನೆಸ್ ಫ್ರೀಕ್ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಸದ್ಯ, ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ, ಗರ್ಭಿಣಿಯರಿಗೆ ಒಂದು ಪ್ರಮುಖ ಫಿಟ್‌ನೆಸ್ ಸಂಬಂಧಿತ ಸಂದೇಶವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟಿ ತಮ್ಮ ಪ್ರೆಗ್ನೆನ್ಸಿಯ ನಡುವಿನ ದಿನಚರಿಯ ಒಂದು ಲುಕ್ ಅನ್ನು ಅಭಿಮಾನಿಗಳಿಗೆ ಶೇರ್ ಮಾಡಿಕೊಂಡಿದ್ದಾರೆ.
ಹೌದು, ಲ್ಯಾವೆಂಡರ್-ಹ್ಯೂಡ್ ಸ್ಪೋರ್ಟ್ಸ್ ಬ್ರಾ ಧರಿಸಿ ಮತ್ತು ಸಡಿಲವಾದ ಜಾಕೆಟ್‌ನೊಂದಿಗೆ ನಟಿ ತಾವು ಹಂಚಿಕೊಂಡ ವಿಡಿಯೋದಲ್ಲಿ ವಿವಿಧ ವ್ಯಾಯಾಮಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಕಾಜಲ್ ಹಂಚಿಕೊಂಡ ಈ ವಿಡಿಯೋಗೆ 1 ಮಿಲಿಯನ್ ಗೂ ಹೆಚ್ಚು ಲೈಕ್ಸ್ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇನ್ನು, ತಮ್ಮ ಪೋಸ್ಟ್‌ಗೆ, "ನಾನು ಯಾವಾಗಲೂ ತುಂಬಾ ಆಕ್ಟಿವ್ ವ್ಯಕ್ತಿಯಾಗಿದ್ದೇನೆ ಮತ್ತು ನನ್ನ ಇಡೀ ಜೀವನದಲ್ಲಿ ಸದಾ ಕೆಲಸ ಮಾಡುತ್ತಲೆ ಇರುತ್ತೇನೆ. ಯಾವುದೇ ತೊಂದರೆಗಳಿಲ್ಲದೆ ಗರ್ಭಿಣಿಯಾಗಿರುವ ಎಲ್ಲಾ ಮಹಿಳೆಯರು ತಮ್ಮ ಪ್ರೆಗ್ನೆನ್ಸಿಯಲ್ಲಿ ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಏರೋಬಿಕ್ ಮತ್ತು ಸ್ಟ್ರೆಂತ್ ಕಂಡೀಷನಿಂಗ್ ವ್ಯಾಯಾಮಗಳಲ್ಲಿ ಭಾಗವಹಿಸಬೇಕು", ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ ಕಾಜಲ್. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net