ಜ್ಯೂನಿಯರ್​ ರಾಜಕುಮಾರ್​ ಎಂದೇ ಜನಪ್ರಿಯರಾಗಿದ್ದ ಜಯಕುಮಾರ್​ ಇನ್ನಿಲ್ಲ

Kodaganur Jayakumar - Final
Published on

ದಾವಣಗೆರೆ: ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟ ಮತ್ತು ಜ್ಯೂನಿಯರ್​ ರಾಜಕುಮಾರ್​ (72) ಎಂದೇ ಜನಪ್ರಿಯರಾಗಿದದ ಕೊಡಗನೂರ ಜಯಕುಮಾರ ಇಂದು ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಜಯಕುಮಾರ್​ ಅಗಲಿದ್ದಾರೆ.

ನೂರಾರು ಚಿತ್ರಗಳಲ್ಲಿ ಮತ್ತು ಧಾರಾವಾಹಿ ಕಂತುಗಳಲ್ಲಿ ಅಭಿನಯಿಸಿದ್ದ ಜಯಕುಮಾರ್​ ಅವರು, ಡಾ. ರಾಜಕುಮಾರ್​ ಅವರನ್ನು ಅನುಕರಣೆ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದರು. ಅದೇ ಕಾರಣಕ್ಕೆ ಅವರಿಗೆ ಜ್ಯೂನಿಯರ್ ರಾಜಕುಮಾರ್​ ಎಂದು ಕರೆಯಲಾಗುತಿತ್ತು.

2019ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಅದಲ್ಲದೆ ವರದಪ್ಪ ಪ್ರಶಸ್ತಿಯೂ ಅವರಿಗೆ ಸಿಕ್ಕತ್ತು. ಇದಲ್ಲದೆ ಖಾಸಗೀ ಸಂಘ-ಸಂಸ್ಥೆಗಳು ನೀಡುವ ಹಲವು ಪ್ರಶಸ್ತಿಗಳು ಜಯಕುಮಾರ್​ ಅವರಿಗೆ ಸಿಕ್ಕಿತ್ತು.

ಕಳೆದ ಕೆಲವು ದಿನಗಳಿಂದ ಜಯಕುಮಾರ್​ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿತ್ತು. ಈ ಸಂಬಂಧ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೃದಯಾಘಾತದಿಂದ ಅಸುನೀಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net