More

    ‘ಆರ್​ಆರ್​ಆರ್​’ ಶೂಟಿಂಗ್​ ಶುರು ಆಯ್ತು ಅಂತ ಹೇಳೋಕೆ ಒಂದು ಪ್ರೋಮೋ …

    ಹೈದರಾಬಾದ್: ಎಸ್​.ಎಸ್​. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್​’ ಚಿತ್ರದ ಚಿತ್ರೀಕರಣ ಸೋಮವಾರದಿಂದ ಪುನಃ ಪ್ರಾರಂಭವಾಗಿದೆ. ಎಲ್ಲರೂ ತಮ್ತಮ್ಮ ಚಿತ್ರಗಳ ಚಿತ್ರೀಕರಣವನ್ನು ಸದ್ದಿಲ್ಲದೆ ಪ್ರಾರಂಭಿಸಿದರೆ, ರಾಜಮೌಳಿ ಮಾತ್ರ ಒಂದು ಪ್ರೋಮೋ ಬಿಡುಗಡೆ ಮಾಡುವ ಮೂಲಕ ಚಿತ್ರೀಕರಣ ಪ್ರಾರಂಭಿಸಿದ್ದಾರೆ.

    ಇದನ್ನೂ ಓದಿ: ಪಾಯಲ್​ ಮೇಲೆ ಒಂದು ಕೋಟಿ ಮಾನನಷ್ಟ ಕೇಸ್​ ಹಾಕಿದ ರಿಚಾ …

    ಹೌದು, ‘ಆರ್​ಆರ್​ಆರ್​’ ಚಿತ್ರದ ಹೊಸ ಪ್ರೋಮೋ ಬಿಡುಗಡೆಯಾಗಿದೆ. ಹಾಗಂತ ಇದು ಚಿತ್ರದ ಪ್ರೋಮೋ ಅಲ್ಲ. ಇದನ್ನು ಬೇಕಾದರೆ ಬ್ಯಾಕ್​ ಟು ಶೂಟ್​ ಪ್ರೋಮೋ ಎಂದು ಕರೆಬಹುದು. ಏಕೆಂದರೆ, ಈ ಪ್ರೋಮೋ ಶುರುವಾಗುವುದು, ತಂತ್ರಜ್ಱರು ಮತ್ತು ಕೆಲಸಗಾರರು ಚಿತ್ರದ ಕೆಲಸಗಳನ್ನು ಪ್ರಾರಂಭಿಸುವುದರ ಮೂಲಕ. ಆ ನಂತರ ಎಲ್ಲರೂ ಹೇಗೆ ತಯಾರಿ ಮಾಡಿಕೊಂಡು ಚಿತ್ರೀಕರಣಕ್ಕೆ ಮುಂದಾದರು ಎಂಬ ವಿಷಯ ಪ್ರೋಮೋದಲ್ಲಿದೆ.

    ಇನ್ನು ಪ್ರೋಮೋದ ಕೊನೆಯಲ್ಲಿ ಅಕ್ಟೋಬರ್​ 22ರಂದು ಇನ್ನೊಂದು ಟೀಸರ್​ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಈ ಟೀಸರ್​ನಲ್ಲಿ ಜ್ಯೂನಿಯರ್​ ಎನ್​.ಟಿ.ಆರ್​ ಅವರ ಪಾತ್ರವನ್ನು ಪರಿಚಯಿಸಲಾಗುತ್ತದಂತೆ.

    ಇದೊಂದು ಟ್ರಯಲ್​ ಶೂಟ್​ ಅಷ್ಟೇ ಎಂದು ಹೇಳಲಾಗುತ್ತಿದೆ. ಟ್ರಯಲ್​ ಶೂಟ್​ ಇರುವುದು ಈ ವಾರ ಮಾತ್ರ. ಆ ನಂತರ ಒಂದು ದೊಡ್ಡ ಗ್ಯಾಪ್​ ಕೊಡಲಾಗುತ್ತದಂತೆ. ದಸರಾ ಹಬ್ಬ ಮುಗಿದ ನಂತರ ಮತ್ತೆ ಚಿತ್ರೀಕರಣ ಪ್ರಾರಂಭವಾಗುವುದು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಫೆಬ್ರವರಿ ಹೊತ್ತಿಗೆ ಚಿತ್ರದ ಚಿತ್ರೀಕರಣವನ್ನು ಮುಗಿಸಿ, ಮುಂದಿನ ಜುಲೈ ಕೊನೆಯ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದು ಚಿತ್ರತಂಡದ ಯೋಚನೆ.

    ಇದನ್ನೂ ಓದಿ: ಟಾಲಿವುಡ್​ ಬ್ಯೂಟಿ ಕಾಜಲ್​ ಮದುವೆ ಫಿಕ್ಸ್​: ಕೊನೆಗೂ ವದಂತಿಗೆ ತೆರೆಎಳೆದ ಮಗಧೀರನ ಬೆಡಗಿ..!

    ‘ಆರ್​ಆರ್​ಆರ್​’ ಚಿತ್ರದಲ್ಲಿ ಜ್ಯೂನಿಯರ್​ ಎನ್​ಟಿಆರ್​, ರಾಮ್​ಚರಣ್​ ತೇಜ, ಅಜಯ್​ ದೇವಗನ್​, ಆಲಿಯಾ ಭಟ್​, ಶ್ರೇಯಾ ಶರಣ್​ ಮುಂತಾದವರು ನಟಿಸುತ್ತಿದ್ದು, ವಿ.ವಿ. ದಾನಯ್ಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಸುದ್ದಿಯಲ್ಲಿರೋಕೆ ಕಂಗನಾ ಇಷ್ಟೆಲ್ಲಾ ಮಾಡ್ತಿದ್ದಾಳೆ … ಶಬಾನಾ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts