ಆಸ್ಕರ್ಸ್​ ಅತ್ಯುತ್ತಮ ನಟ ಪ್ರಶಸ್ತಿ ರೇಸ್​ನಲ್ಲಿ ಜ್ಯೂನಿಯರ್​ ಎನ್​.ಟಿ.ಆರ್​?

Junior NTR 1
Published on

ಲಾಸ್​ ಆಂಜಲೀಸ್​: ಆಸ್ಕರ್ಸ್​ ಪ್ರಶಸ್ತಿ ಸಮಾರಂಭ ಮಾರ್ಚ್​​ 12ರಂದು ನಡೆಯಲಿದೆ. ಅದಕ್ಕೂ ಮೊದಲು, ಇನ್ನು ಮೂರು ದಿನಗಳಲ್ಲಿ ಅಂದರೆ ಜನವರಿ 24ರಂದು ಆಸ್ಕರ್​ ಪ್ರಶಸ್ತಿ ರೇಸ್​ನಲ್ಲಿರುವ ನಾಮಿನಿಗಳ ಪಟ್ಟಿ ಹೊರಬೀಳಲಿದೆ. ಈ ಪಟ್ಟಿಯಲ್ಲಿ 'RRR' ಚಿತ್ರದ ನಾಯಕ ತಾರಕ್​ ಅಲಿಯಾಸ್​ ಜ್ಯೂನಿಯರ್​ ಎನ್​.ಟಿ.ಆರ್​ ಅವರ ಸಹ ಇರಬಹುದಾ ಎಂಬ ಕುತೂಹಲದಿಂದ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಆಸ್ಕರ್ಸ್​ ಸ್ಪರ್ಧೆಯಲ್ಲಿ ಸ್ಪರ್ಧೀಸಲಿರುವ ಚಿತ್ರಗಳನ್ನು ತೀರ್ಪುಗಾರರು ನೋಡುತ್ತಿದ್ದು, ಜನವರಿ 24ರಂದು ಅಂತಿಮ ಪಟ್ಟಿ ಹೊರಬೀಳಲಿದೆ. ಈ ಪಟ್ಟಿಯಲ್ಲಿ 'RRR' ಚಿತ್ರದ ಹೆಸರು ಹಲವು ವಿಭಾಗಗಳಲ್ಲಿ ಕಂಡುಬರುವ ಸಾಧ್ಯತೆ ಇದೆ. ಈ ಪೈಕಿ ಅತ್ಯುತ್ತಮ ನಟ ಪ್ರಶಸ್ತಿಯಲ್ಲಿ ತಾರಕ್​ ಹೆಸರು ಸಹ ಬಲವಾಗಿ ಕೇಳಿಬರುತ್ತಿದೆ. ಅಷ್ಟೇ ಅಲ್ಲ, 'ಯುಎಸ್​ಎ ಟುಡೆ' ಎಂಬ ಪತ್ರಿಕೆ ಸಹ ತಾರಕ್​ ಹೆಸರು ಅತ್ಯುತ್ತಮ ನಟ ಪಟ್ಟಿಯಲ್ಲಿ ಬರುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದೆ. ಬರೀ ಅತ್ಯುತ್ತಮ ನಟ ಅಷ್ಟೇ ಅಲ್ಲ, ಅತ್ಯುತ್ತಮ ಹಾಡು, ಚಿತ್ರ ಮುಂತಾದ ವಿಭಾಗಗಳಲ್ಲೂ ಚಿತ್ರವು ಸ್ಪರ್ಧೆ ಒಡ್ಡಬಹುದು ಎಂದು ಹೇಳಲಾಗುತ್ತಿದೆ.

ಯಾವಾಗ ಇಂಥದ್ದೊಂದು ಸುದ್ದಿ ಕೇಳಿ ಬಂತೋ, ಜ್ಯೂನಿಯರ್​ ಎನ್​.ಟಿ.ಆರ್​ ಅಭಿಮಾನಿಗಳು ಸಂಭ್ರಿಮಿಸುತ್ತಿರುವುದಷ್ಟೇ ಅಲ್ಲ, #NTRforOscars ಎಂಬ ಅಭಿಯಾನವನ್ನು ಸೋಷಿಯಲ್​ ಮೀಡಿಯಾದಲ್ಲಿ ಶುರು ಮಾಡಿದದಾರೆ. ಈ ಅಭಿಯಾನ ಈಗಾಗಲೇ ಸಾಕಷ್ಟು ಟ್ರೆಂಡ್​ ಆಗುತ್ತಿದೆ.

ರಾಜಮೌಳಿ ನಿರ್ದೇಶನದ 'ಅರ್​ಆರ್​ಅರ್​' ಚಿತ್ರವು ಮೊದಲ ದಿನವೇ 223 ಕೋಟಿ ರೂ.ಗಳ ಕಲೆಕ್ಷನ್​ ದಾಖಲಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಿತ್ತು. ಈ ಚಿತ್ರವನ್ನು ವಿ.ವಿ. ದಾನಯ್ಯ ನಿರ್ಮಿಸಿದ್ದು, ಆಲಿಯಾ ಭಟ್​, ಅಜಯ್​ ದೇವಗನ್​ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net