

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಡೀ ಅಭಿಮಾನಿ ಬಳಗ ವರ್ಚುವಲ್ ಪಾರ್ಟಿಯಲ್ಲಿ ತೊಡಗಿಸಿಕೊಂಡು, ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳನ್ನು ರವಾನಿಸುತ್ತಿದ್ದಾರೆ. ಅದರಂತೆ ಇದೀಗ ಶಾರುಖ್ ಜನ್ಮದಿನಕ್ಕೆ ನಟಿ ಜೂಹಿ ಚಾವ್ಲಾ ವಿಶೇಷ ಕಾರ್ಯವೊಂದಕ್ಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲಿ ಡಬ್ ಆಗಿ ತೆರೆಕಾಣಲಿದೆ ಎಸ್ಪಿಬಿ ಸಿನಿಮಾ
ಕಾವೇರಿ ಕಾಲಿಂಗ್ ಅಭಿಯಾನದ ಅಡಿಯಲ್ಲಿ ಶಾರುಖ್ ಜನ್ಮದಿನದ ನಿಮಿತ್ತು 500 ಸಸಿಗಳನ್ನು ನೆಡುವುದಾಗಿ ಹೇಳಿದ್ದಾರೆ. ಜೂಹಿ ಅವರ ಈ ವಿಚಾರ ಅಭಿಮಾನಿ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರೆಡ್ ಚಿಲ್ಲಿಸ್ ಸಂಸ್ಥೆಯ ಸಹ ಸಂಸ್ಥಾಪಕಿಯಾಗಿರುವ ಜೂಹಿ, ಶಾರುಖ್ ಹೆಸರಲ್ಲಿ 500 ಸಸಿ ನೆಡುವ ಯೋಜನೆ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಸಸಿ ನೆಡುವಂತೆಯೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್)