ಆಂಧ್ರಪ್ರದೇಶ: ಇಂದು (ಗುರುವಾರ, ಮೇ.28) ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲಗು ಸಿನಿಮಾರಂಗದ ಮೇರು ನಟ ದಿವಂಗತ ಎನ್.ಟಿ. ರಾಮ್ರಾವ್ ಅವರ 103 ನೇ ಹುಟ್ಟುಹಬ್ಬವಾಗಿದ್ದು, ಹೈದರಾಬಾದ್ನಲ್ಲಿರುವ ಎನ್.ಟಿ.ಆರ್ ಘಾಟ್ಗೆ ಮೊಮ್ಮಗ ಜೂನಿಯರ್ ಎನ್.ಟಿ.ಆರ್ (JrNTR on SrNTR) ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ನಮ್ಮ ಭದ್ರತಾ ಸಿಬ್ಬಂದಿಗಳೊಂದಿಗೆ ಎನ್ಟಿಆರ್ ಘಾಟ್ಗೆ ಬಂದಿಳಿದ ಜೂನಿಯರ್ ಎನ್ಟಿಆರ್ ಅಜ್ಜನ ಸಮಾಧಿ ಬಳಿ ಭಾವುಕರಾಗಿ ಕಂಡುಬಂದಿದ್ದು, ಹೂವನ್ನು ಸಮಾಧಿ ಮೇಲೆ ಇಡುವ ಮೂಲಕ ಗೌರವ ಸಲ್ಲಿಸಿದರು.