ಅಂಬಾನಿ ಬಂಗಲೆ ಖರೀದಿಸಿದ ಹಾಲಿವುಡ್​ ನಟಿ ಜೆನ್ನಿಫರ್​ ಲೋಪೆಜ್​ ! ಎಷ್ಟು ಕೋಟಿರ ಮಾರಾಟವಾಯ್ತು ಗೊತ್ತಾ?

Ben-Jenniefer (3)
Published on

ಹಾಲಿವುಡ್​ ತಾರಾ ಜೋಡಿ ಜೆನ್ನಿರ್​ ಲೋಪೆಜ್​ ಮತ್ತು ಬೆನ್​ ಅ್ಲೆಕ್​, ಇಶಾ ಅಂಬಾನಿ ಒಡೆತನದ ಬಂಗಲೆಯನ್ನು ಖರೀದಿಸಿದ್ದಾರೆ. ಲಾಸ್​ ಏಂಜಲೀಸ್​ನಲ್ಲಿರುವ ಈ ಬಂಗಲೆಯ ಮೊತ್ತ 500 ಕೋಟಿ ರೂ. ಎನ್ನಲಾಗಿದೆ. 38 ಸಾವಿರ ಚದರಡಿಯ ಈ ಬಂಗಲೆಯು 12 ರೂಮ್​ಗಳು, 24 ಬಾತ್​ರೂಂ, ಜಿಮ್​, ಸಲೂನ್​, ಸ್ಪಾ, ಒಳಾಂಗಣ ಈಜುಕೊಳ ಸೇರಿ ಹಲವು ಐಶಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ.

2021ರಿಂದ ಜೆನ್ನಿರ್​ ಮತ್ತು ಬೆನ್​ ಡೇಟಿಂಗ್​ನಲ್ಲಿದ್ದು, 2022ರಲ್ಲಿ ಮದುವೆಯಾಗಿದ್ದರು. 2022ರಲ್ಲಿ ಪೆಸಿಫಿಕ್​ ಪಲಿಸೇಡ್ಸ್​ನಲ್ಲಿದ್ದ ಮನೆಯನ್ನು ಬೆನ್​ 230 ಕೋಟಿ ರೂ. ಗೆ ಮಾರಿದ್ದರು. ಮತ್ತೊಂದೆಡೆ ಕಳೆದ ವರ್ಷ ಜೆನ್ನಿರ್​ ಕೂಡ ಬೆಲ್​ ಏರ್​ನಲ್ಲಿದ್ದ ಮನೆಯನ್ನು 280 ಕೋಟಿ ರೂ.ಗೆ ಮಾರಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಹೊಸ ಮನೆಯ ಹುಡುಕಾಟದಲ್ಲಿದ್ದ ಈ ಜೋಡಿಗೆ ಅಂಬಾನಿ ಒಡೆತನದ ಈ ಬಂಗಲೆ ಇಷ್ಟವಾಗಿದ್ದು, ಖರೀದಿಸಿದ್ದಾರೆ ಎನ್ನಲಾಗಿದೆ.

2018ರಲ್ಲಿ ಉದ್ಯಮಿ ಆನಂದ್​ ಪಿರಮಳ್​ರನ್ನು ಮದುವೆಯಾದ ಇಶಾ 2022ರಲ್ಲಿ ಗರ್ಭಾವಸ್ಥೆಯಲ್ಲಿದ್ದಾಗ ಲಾಸ್​ ಏಂಜಲೀಸ್​ ಬಂಗಲೆಯಲ್ಲಿ ವಾಸವಿದ್ದರು. ನಂತರ ಅಲ್ಲಿಗೆ ಹೆಚ್ಚು ಹೋಗುತ್ತಿರಲಿಲ್ಲ. ಸದ್ಯ ಮುಂಬೈನ ಬಾಂದ್ರಾ&ವರ್ಲೀ ಸೀಲಿಂಕ್​ನಲ್ಲಿ ಪಿರಮಳ್​ ಕುಟುಂಬದವರು 1000 ಕೋಟಿ ರೂ. ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದು, ಆನಂದ್​ ಮತ್ತು ಇಶಾ ಅಲ್ಲಿಯೇ ವಾಸವಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net