64ನೇ ವಯಸ್ಸಿನಲ್ಲಿ ಮೂರನೇ ಮದುವೆ! ಹಿರಿಯ ನಟಿ ಜಯಸುಧಾ ಕೊಟ್ಟ ಸ್ಪಷ್ಟನೆ ಹೀಗಿದೆ…

Jayasudha
Published on

ಹೈದರಾಬಾದ್​: ಟಾಲಿವುಡ್​ನ ಖ್ಯಾತ​ ಹಿರಿಯ ನಟಿ ಜಯಸುಧಾ ಅವರು ಕನ್ನಡಿಗರಿಗೂ ಪರಿಚಿತ. ಸಾಹಸಸಿಂಹ ವಿಷ್ಣುವರ್ಧನ್​ ಅಭಿನಯದ ನೀ ತಂದ ಕಾಣಿಕೆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆ ಚಿತ್ರದ "ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ" ಇಂದಿಗೂ ಅನೇಕ ಬಾಯಲ್ಲಿ ಗುನುಗುತ್ತಿರುತ್ತದೆ. ಇನ್ನು ನಟ ಶಿವರಾಜ್​ ಕುಮಾರ್​ ಅಭಿನಯದ ವಜ್ರಕಾಯ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ತಾಯಿಯ ಮಡಿಲು ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ನಟಿಸಿದ್ದು ಕೆಲವೇ ಸಿನಿಮಾಗಳಾದರೂ ಕನ್ನಡಿಗರಿಗೆ ಇವರ ಪರಿಚಯ ಇದೆ.

ಸರಿ ಇವಾಗ ಅವರ ಪರಿಚಯದ ಅಗತ್ಯವೇನು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು, ಅದಕ್ಕೆ ಉತ್ತರ ಮುಂದಿದೆ ಓದಿ... ಕೆಲವು ದಿನಗಳಿಂದ ಜಯಸುಧಾ ಭಾರಿ ಸುದ್ದಿಯಲ್ಲಿದ್ದಾರೆ. ತಮ್ಮ 64ನೇ ವಯಸ್ಸಿನಲ್ಲಿ ಜಯಸುಧಾ 3ನೇ ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ನಟ ವಿಜಯ್​ ಅಭಿನಯದ ವಾರಸುಡು ಸಿನಿಮಾದ ಪ್ರೀ ರಿಲೀಸ್​ ಕಾರ್ಯಕ್ರಮದಲ್ಲಿ ಅಮೆರಿಕ ಮೂಲದ ವ್ಯಕ್ತಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಅವರ ಮದುವೆ ವದಂತಿ ಹಬ್ಬಿದ್ದು, ಅದಕ್ಕೆ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದಾರೆ.

ನೀವು ಅಂದುಕೊಂಡಂತೆ ಮದುವೆಯಾಗಿಲ್ಲ. ನನ್ನೊಂದಿಗೆ ನೀವು ನೋಡಿದ ವ್ಯಕ್ತಿಯ ಹೆಸರು ಫಿಲಿಪ್ ರೂಲ್ಸ್. ನನ್ನ ಜೀವನ ಚರಿತ್ರೆಯನ್ನು ಶೂಟ್​ ಮಾಡಲು ಅಮೆರಿಕದಿಂದ ಭಾರತಕ್ಕೆ ಬಂದಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಮಹತ್ವದ ಬಗ್ಗೆ ತಿಳಿದುಕೊಳ್ಳಲು ನಾನು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿದ್ದಾರೆ. ಸಂಶೋಧನೆ ನಡೆಸುತ್ತಿದ್ದಾಗ ಅಂತರ್ಜಾಲದಲ್ಲಿ ನನ್ನ ಬಗ್ಗೆ ತಿಳಿದುಕೊಂಡರು. ನನ್ನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇಲ್ಲಿ ಬಂದಿದ್ದಾರೆ. ನನ್ನ ಸಿನಿಮಾಗಳು ಹಾಗೂ ಶೂಟಿಂಗ್​ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನನ್ನೊಂದಿಗೆ ಬರುತ್ತಿದ್ದಾರೆ. ಅದನ್ನು ಹೊರತುಪಡಿಸಿ ನೀವು ಅಂದುಕೊಂಡಂತೆ ಏನು ಇಲ್ಲ ಎಂದು ವದಂತಿಗೆ ತೆರೆ ಎಳೆದರು.

ಇನ್ನು ಜಯಸುಧಾ ಅವರು ಈ ಹಿಂದೆ ಕೆಲ ಕಾಲ ಅಮೆರಿಕದಲ್ಲೇ ವಾಸವಿದ್ದರು. ಸಿನಿಮಾಗಳಿಂದ ಬ್ರೇಕ್​ ಪಡೆದು ಅಮೆರಿಕದಲ್ಲಿ ಕಾಲ ಕಳೆದಿದ್ದರು. ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದಾಗ ಫಿಲಿಪ್ ರೂಲ್ಸ್ ಅವರನ್ನು ಭೇಟಿ ಮಾಡಿದ್ದೆ ಎಂದು ಜಯಸುಧಾ ತಿಳಿಸಿದ್ದಾರೆ.

ಅಂದಹಾಗೆ ಜಯಸುಧಾ ಅವರು ಎನ್​ಟಿಆರ್​, ಚಿರಂಜೀವಿ, ಮೋಹನ್​ ಬಾಬು ಮತ್ತು ವಿಷ್ಣುವರ್ಧನ್​ ಸೇರಿದಂತೆ ಪ್ರಮುಖ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಜಯಸುಧಾ ಇತ್ತೀಚೆಗೆ ತಾಯಿ, ಅಜ್ಜಿ ಸೇರಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ವೈಯಕ್ತಿಕ ವಿಚಾರಕ್ಕೆ ಬಂದರೆ ಮೊದಲಿಗೆ ಕಾಕರ್ಲಪುಡಿ ಮೂಲದ ಉದ್ಯಮಿ ರಾಜೇಂದ್ರ ಪ್ರಸಾದ್​ ಎಂಬುವರನ್ನು ಮದುವೆ ಆಗಿದ್ದರು. ಆದರೆ, ಭಿನ್ನಾಭಿಪ್ರಾಯಗಳಿಂದ ಇಬ್ಬರು ದೂರ ಆದರು. ಇದಾದ ಬಳಿಕ ನಂತರ ಬಾಲಿವುಡ್‌ನ ಜಿತೇಂದ್ರ ಕಪೂರ್ ಸೋದರಸಂಬಂಧಿ ನಿತಿನ್ ಕಪೂರ್ ಅವರನ್ನು ವಿವಾಹವಾದರು. ಎರಡನೇ ಗಂಡ 2017ರಲ್ಲಿ ಅಸುನೀಗಿದರು. ಮಾನಸಿಕ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net