ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ಚಿನ್ನೇಗೌಡ ನಿಧನ..jayamma Chinnegowda

Jayamma Chinnegowda Passes Away
Jayamma Chinnegowda Passes Away
Published on

ಪ್ರಮುಖ ಮುಖ್ಯಾಂಶಗಳು

  • ನಟ ವಿಜಯ್ ರಾಘವೇಂದ್ರ ಮತ್ತು ನಟ ಶ್ರೀಮುರಳಿ ಅವರ ತಾಯಿ, ಹಿರಿಯ ನಟಿ ಜಯಮ್ಮ ಚಿನ್ನೇಗೌಡ
  • ವಯೋಸಹಜ ಕಾಯಿಲೆ ಮತ್ತು ಆರೋಗ್ಯದಲ್ಲಿನ ಏರುಪೇರಿನಿಂದಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
  • ಜಯಮ್ಮನವರು ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಎ. ಚಿನ್ನೇಗೌಡ ಅವರ ಪತ್ನಿ.
Jayamma Chinnegowda Passes Away: ಸ್ಯಾಂಡಲ್​ವುಡ್​ನ ಖ್ಯಾತಿಯ ನಿರ್ಮಾಪಕರಾದ ಎಸ್ ಎ ಚಿನ್ನೇಗೌಡ ಅವರ ಪತ್ನಿ ಜಯಮ್ಮ ಚಿನ್ನೇಗೌಡ ಜೂನ್​.16ರಂದು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಮುಂಜಾನೆ 7.05ಕ್ಕೆ ಕೊನೆಯುಸಿರೆಳೆದಿದ್ದಾರೆ.
ನಟ ವಿಜಯ್ ರಾಘವೇಂದ್ರ ಮತ್ತು ನಟ ಶ್ರೀಮುರಳಿ ಅವರ ತಾಯಿ, ಹಿರಿಯ ನಟಿ ಜಯಮ್ಮ ಚಿನ್ನೇಗೌಡ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವಯೋಸಹಜ ಕಾಯಿಲೆ ಮತ್ತು ಆರೋಗ್ಯದಲ್ಲಿನ ಏರುಪೇರಿನಿಂದಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ.

ಡಾ.ರಾಜ್‌ಕುಮಾರ್ ಅವರ ಕುಟುಂಬಕ್ಕೆ ಸಂಬಂಧಿ

ಜಯಮ್ಮನವರು ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಎ. ಚಿನ್ನೇಗೌಡ ಅವರ ಪತ್ನಿ ಹಾಗೂ ಹಿರಿಯ ನಟ ಡಾ.ರಾಜ್‌ಕುಮಾರ್ ಅವರ ಕುಟುಂಬಕ್ಕೆ ಸಂಬಂಧಿಯಾಗಿದ್ದರು. ಡಾ. ರಾಜ್​ಕುಮಾರ್​ ಅವರ ಪತ್ನಿ ಪಾರ್ವತಮ್ಮ ಅವರ ಸಹೋದರ ಚಿನ್ನೇಗೌಡ ಹೀಗಾಗಿ ಎರಡು ಕುಟುಂಬದ ಮಧ್ಯೆ ಅವಿನಾಭಾವ ಸಂಬಂಧವಿತ್ತು.


ಪಾರ್ಥೀವ ಶರೀರ ದರ್ಶನಕ್ಕೆ ವ್ಯವಸ್ಥೆ

ಮೌಂಟ್​ ಕಾರ್ಮೆಲ್​​ ಕಾಲೇಜಿನ ಅಪಾರ್ಟ್​ಮೆಂಟ್​ ಬಳಿ ಮಧ್ಯಾಹ್ನ ಮೂರು ಗಂಟೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಇನ್ನು ಜಯಮ್ಮ ಅವರ

ಜಯಮ್ಮ ನಿರ್ಮಿಸಿದ ಸಿನಿಮಾಗಳಿವು

2006ರಲ್ಲಿ ರಿಲೀಸ್​ ಆಗಿದ್ದ ಸೇವಂತಿ ಸೇವಂತಿ ಸಿನಿಮಾವನ್ನು ಎಸ್​ಎ ಚಿನ್ನೇಗೌಡರು ಹಾಗೂ ಜಯಮ್ಮ ನಿರ್ಮಿಸಿದ್ದರು. ಈ ಸಿನಿಮಾವನ್ನು ಎಸ್​​ ನಾರಾಯಣ್​​ ಅವರು ನಿರ್ದೇಶೀಸಿದ್ದರು. ಸಿನಿಮಾ 100 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ಈ ಸಿನಿಮಾದಲ್ಲಿ ನಟಿ ರಮ್ಯಾ ನಾಯಕಿಯಾಗಿ ನಟಿಸಿದ್ದರು. 2008ರಲ್ಲಿ ರಿಲೀಸ್​ ಆಗಿದ್ದ ಫಣಿ ರಾಮಚಂದ್ರ ಅವರ ನಿರ್ದೇಶನದ ಗಣೇಶ ಮತ್ತೆ ಬಂದ ಸಿನಿಮಾವನ್ನು ಜಯಮ್ಮ ಅವರ ನಿರ್ಮಾಣ ಸಂಸ್ಥೆಯೇ ನಿರ್ಮಿಸಿತ್ತು. ಇದರಲ್ಲಿ ವಿಜಯ್​​ ರಾಘವೇಂದ್ರ ನಾಯಕನಾಗಿ ನಟಿಸಿದ್ದರೆ, ನೀತು ನಟಿಯಾಗಿ ಮಿಂಚಿದ್ದರು. ಇವರೊಂದಿಗೆ ವಿಶಾಲ್​ ಹೆಗಡೆ, ಅನಂತ್​ನಾಗ್​ ವಿನಯ ಪ್ರಸಾದ್​ ರಮೇಶ್​ ಭಟ್​​ ಬಣ್ಣ ಹಚ್ಚಿದ್ದರು. ಶ್ರೀ ಮುರುಳಿ ಅವರ ಚಂದ್ರ ಚಕೋರಿ, ಉ್ರಗಂ, ಕಂಠಿ ಸೇರಿದಂತೆ ಹಲವು ಸಿನಿಮಾಕ್ಕೆ ಜಯಮ್ಮನವರ ಬೆಂಬಲ ಇತ್ತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net