ಅನ್ಶುಲಾ ಕಪೂರ್ ಮದುವೆಗೆ ಬಾಯ್ಫ್ರೆಂಡ್ಗೆ ಗಿಫ್ಟ್ ಕೊಟ್ರಾ ಜಾನ್ವಿ ಕಪೂರ್
ಜಾನ್ವಿ ಕಪೂರ್ ಅವರ ಈ ಸ್ವೀಟ್ ಗಿಫ್ಟ್ಗೆ ನೆಟ್ಟಿಗರು ಫಿದಾ
Janhvi Kapoor boyfriend name in mehendi: ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಅನ್ಶುಲಾ ಕಪೂರ್ ಅವರು ಸ್ಕ್ರಿಪ್ಟ್ ರೈಟರ್ ರೋಹನ್ ಥಕ್ಕರ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಸಮಾರಂಭದಿಂದಾಗಿ ಕಪೂರ್ ಕುಟುಂಬದಲ್ಲಿ ಮತ್ತೆ ಸಂತೋಷ ಮನೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಇಡೀ ಕುಟುಂಬದ ಡ್ರೆಸ್ಸಿಂಗ್ ಶೈಲಿ, ಆಭರಣದ ಚರ್ಚೆಯಾಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ನಟಿ ಜಾನ್ವಿ ಕಪೂರ್ ಅವರ ಪ್ರಿಯಕರ ಶಿಖರ್ ಪಹಾರಿಯಾಗೆ ಕೊಟ್ಟ ಕ್ಯೂಟ್ ಗಿಫ್ಟ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.
ಜಾನ್ವಿ ಕೈ ಮೇಲೆ ಶಿಖು ಹೆಸರು
ಅನ್ಶುಲಾ ಮದುವೆಯಲ್ಲಿ ಜಾನ್ವಿ ಕಪೂರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಆಕರ್ಷಕ ಸೀರೆ ಧರಿಸಿ ಮಿಂಚಿದ್ದರು. ಆದರೆ ಅವರು ಕೈಗೆ ಹಾಕಿಕೊಂಡಿದ್ದ ಮೆಹಂದಿಯಲ್ಲಿ ನೆಟ್ಟಿಗರು ಒಂದು ಸೂಕ್ಷ್ಮವಾದ ವಿಚಾರವನ್ನು ಬೆಳಕಿಗೆ ತಂದಿದ್ದಾರೆ. ಅದೇನೆಂದರೆ ನಟಿಯ ಪ್ರಿಯಕರ ಶಿಖರ್ ಪಹಾರಿಯಾ ಅವರ ಅಡ್ಡಹೆಸರಾದ "ಶಿಖು" ಎಂದು ಹಿಂದಿಯಲ್ಲಿ ಬರೆದುಕೊಂಡಿರುವುದು.
ಯಾರು ಈ ಶಿಖರ್ ಪಹಾರಿಯಾ?
ಹೌದು ಜಾನ್ವಿ ಕಪೂರ್ ಮತ್ತು ಉದ್ಯಮಿ ಶಿಖರ್ ಪಹಾರಿಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಅವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಶಿಖರ್ ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂದೆ ಅವರ ಮೊಮ್ಮಗ. ಸದ್ಯ ಅವರು ಉದ್ಯಮಿ ಮತ್ತು ಹೂಡಿಕೆದಾರರಾಗಿದ್ದಾರೆ.
ಮೆಹೆಂದಿಯಲ್ಲಿ ಹೆಸರು ಬರೆಸಿಕೊಂಡಿರುವ ಜಾನ್ವಿ
ಜುಲೈ 8 ರಂದು ಜಾನ್ವಿ ಕಪೂರ್ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸಣಿ ಪಟಗಳಲ್ಲಿ ಒಂದು ಫೋಟೋದಲ್ಲಿ ಹೀಗಿದೆ. ಜಾನ್ವಿ ಅವರು ಕೈ ಭುಜದ ಮೇಲಿಟ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದರಲ್ಲಿ ಸೂಕ್ಷ್ಮವಾಗಿ, ಬಹಳ ಕ್ಲಿಯರ್ ಆಗಿ ಶಿಖು ಎಂದು ಬರೆಸಿಕೊಂಡಿರುವುದು ಕಾಣಸಿಗುತ್ತದೆ.
ಜಾನ್ವಿ ಶಿಖರ್ ಡೇಟಿಂಗ್
ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಅವರ ಹೆಸರು ಕಳೆದ ಹಲವು ವರ್ಷಗಳಿಂದ ಒಟ್ಟಿಗೆ ಕೇಳಿಬರುತ್ತಿದೆ. 2016 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಆದರೆ 2018 ರಲ್ಲಿ ಜಾನ್ವಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಂತರ ಇಬ್ಬರೂ ದೂರಾಗಿದ್ದರು. ಮತ್ತೆ 2023 ರಲ್ಲಿ ಒಂದಾದರು ಎನ್ನಲಾಗಿದೆ. ಇಬ್ಬರೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಒಟ್ಟಿಗೆ ಸಮಯ ಕಳೆಯುವುದು ಮುಂದುವರಿದಿದ್ದು, ಅವರ ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಜಾನ್ವಿ ಮದುವೆ
ಜಾನ್ವಿ ಹಾಗೂ ಶಿಖರ್ ಮದುವೆಯಾಗುವ ಬಗ್ಗೆ ಜನವರಿಯಲ್ಲಿ ಸಾಕಷ್ಟು ಗಾಸಿಪ್ಸ್ ಹರಿದಾಡಿತ್ತು. ಆದರೆ ಈ ಬಗ್ಗೆ ಅವರ ತಂದೆ ಬೋನಿ ಕಪೂರ್ ಮಾತನಾಡಿ, ಇದು ಶುದ್ಧ ಸುಳ್ಳು, ಸತ್ಯಕ್ಕೆ ದೂರವಾದದ್ದು ಎಂದಿದ್ದರು. ಆ ಮೂಲಕ ವದಂತಿಗಳನ್ನು ತಳ್ಳಿಹಾಕಿದ್ದರು,(ಏಜೆನ್ಸೀಸ್).