ಜೇಮ್ಸ್‌ ಚಿತ್ರಕ್ಕೆ ಪುನೀತ್ ವಾಯ್ಸ್ ರಿಕ್ರಿಯೇಷನ್ !

jems pic
Published on

ಮೈಸೂರು: ಜೇಮ್ಸ್‌ ಚಿತ್ರಕ್ಕೆ ಪುನೀತ್ ವಾಯ್ಸ್ ರಿಕ್ರಿಯೇಷನ್ ವಿಚಾರದ ಬಗ್ಗೆ ನಟ ಶಿವರಾಜ್​ ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಚಿತ್ರ ಬಿಡುಗಡೆ ಮೊದಲೇ ಮಾಡಬಹುದಿತ್ತು , ಈಗ ಇದನ್ನು ಕೇಳಿ ನನಗೆ ಈ ರೀತಿಯ ತಂತ್ರಜ್ಞಾನ ಇರುವುದು ನಿಜಕ್ಕೂ ಅಚ್ಚರಿಯಾಗಿದೆ ಎಂದಿದ್ದಾರೆ.

ಫಿಲಂ ವಾಯ್ಸ್ ರಿಗೈನ್ಡ್ ಫುಲ್ ಕಂಪ್ಲೀಟ್ ಆಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಇದು ಯಾವ ರೀತಿ ಆಗಿದೆ ಎಂಬುದು ಗೊತ್ತಿಲ್ಲ.ಇದೀಗ ಅಚ್ಚರಿ ಜತೆ ಸಂತೋಷವೂ ಆಯಿತು ಎಂದರು.

ನೂರು ಕೆಜಿಎಫ್‌ ಚಿತ್ರಕ್ಕೆ ಒಂದು ಪುಷ್ಪ ಸಿನಿಮಾ ಸಮಾನ ಎಂಬ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು,ಚಿತ್ರರಂಗ ಅನ್ನೋದು ಒಂದು ಸಮುದ್ರವಿದ್ದಂತೆ.ಅದರಲ್ಲಿ ಯಾರು ಬೇಕಾದರೂ ಈಜಬಹುದು‌.ಯಾರು ಬೇಕಾದರೂ ಮೇಲಕ್ಕೆ ಹೋಗಬಹುದು.ಕೆಳಗೂ ಹೋಗಬಹುದು.ಇದು ನನಗೆ ಬೇಕಿಲ್ಲದ ವಿಚಾರ. ಅದನ್ನು ಜನತೆಗೆ ಬಿಡೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net